Most commented posts
- ಶ್ರೀ ಬಿ ವಿ ಕಕ್ಕಿಲ್ಲಾಯ ಇನ್ನಿಲ್ಲ — 1 comments
- BVK Photos : ಬಿವಿಕೆ ಚಿತ್ರಗಳು — 1 comments
Mar 23
ಮಾರ್ಚ್ 23, 2010 ರ ವಾರ್ತಾಭಾರತಿಯಲ್ಲಿ ಪ್ರಕಟಿತ ಲೇಖನ) [dropcap]ನ[/dropcap]ಮ್ಮ ಸಮಾಜದ ಮನೋಸ್ಥಿತಿಯ ಬಗೆಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರು ಒಂದು ವಿಶ್ಲೇಷಣೆಯನ್ನು ನೀಡಿ ದ್ದಾರೆ; ‘ಹುಚ್ಚ್ಚು ಮನಸ್ಸಿನ ಹತ್ತು ಮುಖಗಳು’ ಎಂದು, ಅದನ್ನೇ ಒಂದು ಸಂಸ್ಕತ ಶ್ಲೋಕದ ಮೂಲಕ ಅವರು ಚಿತ್ರಿಸಿದ್ದಾರೆ. ‘ಮರ್ಕಟಸ್ಯ ಸುರಾಪಾನಂ ಮದ್ಯೇ ವಶ್ಚೀಕ ತಾಡನಂ, ತನ್ಮದ್ಯೆ ಭೂತ ಸಂಚಾರಂ, ಯದ್ವಾ ತದ್ವಾ ಭವಿಷ್ಯತೀ’ ಹೆಂಡ ಕುಡಿದ ಮಂಗನಿಗೆ ಚೇಳು ಕಡಿಯು ತ್ತದೆ. ಭೂತ ಸಂಚಾರ ಆಗುತ್ತದೆ. ಮತ್ತೆ ನಡೆಯುವುದು ಏನೇನೋ …
Mar 16
(ಬರೆದದ್ದು: ಮಾರ್ಚ್ 16, 2010) ವಾರ್ತಾಭಾರತಿಯಿಂದ [dropcap]ಇ[/dropcap]ಡೀ ರಾಜ್ಯದ ಪ್ರಾಜ್ಞರನ್ನು ಮತ್ತು ಸಾಮಾನ್ಯ ಜನರನ್ನು ಕಳೆದ ಕೆಲವು ದಿನಗಳಿಂದ ಪ್ರತಿಭಟನೆಗೆ ಪ್ರಚೋದಿಸಿದ್ದ ಹಂಪಿ ವಿವಿಯ ಭೂಮಿ ಪರ ಭಾರೆಯ ಪ್ರಶ್ನೆಯನ್ನು ಕೈ ಬಿಡಲಾಗಿದೆ ಎಂದು ಮುಖ್ಯ ಮಂತ್ರಿಗಳು ಘೋಷಿಸಿರುವುದು ಸಮಾಧಾನ ತಂದಿದೆ. ಆದರೆ ಇದು ಕೇವಲ ಹೇಳಿಕೆಯಾಗಿ ಉಳಿಯಬಾರದು. ಕಾರ್ಯತಃ ವಿಜಯನಗರ ಸಾಮ್ರಾಜ್ಯ ಪುನಶ್ಚೇತನ ಪ್ರತಿಷ್ಠಾನದ ಹೆಸರಿನಲ್ಲಿ ಬಳ್ಳಾರಿ ಜಿಲ್ಲೆಯ ಗಣಿ ಭೂಮಿ ಕಬಳಿಕೆದಾರರು ಸರಕಾರದ ರಕ್ಷಣೆಯಲ್ಲಿ ಅಮೂಲ್ಯ ನೈಸರ್ಗಿಕ ಸಂಪತ್ತನ್ನು, ಅರಣ್ಯ ಭೂಮಿ ಮತ್ತು ಕಷಿ …
Feb 24
ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಫೆಬ್ರವರಿ 24, 2010) [dropcap]ಕ[/dropcap]ರ್ನಾಟಕದ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 1947 ರಲ್ಲಿ ತೆಂಕನಾಡು ಕಾಸರಗೋಡಿನಲ್ಲಿ ಅನೇಕ ನಿರೀಕ್ಷೆಗಳ ಮತ್ತು ಹೋರಾಟದ ಕೆಚ್ಚಿನ ನಡುವೆ ಜರಗಿತ್ತು. ಕಾಸರಗೋಡು ಈ ಬರಹಗಾರನ ಹುಟ್ಟೂರು. ಅಂದಿನ ಸಮ್ಮೇಳನದಲ್ಲಿ ನಾಡಿನ ಹಿರಿಯ ಸಾಹಿತಿಗಳ ಸ್ವಾಗತದ ವ್ಯವಸ್ಥೆ ನಡೆಸಿದ್ದ ಸ್ವಯಂ ಸೇವಕ ತಂಡದಲ್ಲಿ ಓರ್ವ ಕಾರ್ಯ ನಿರ್ವಾಹಕನಾಗಿ ಈತ ಆ ಸಮ್ಮೇಳನದಲ್ಲಿ ಭಾಗಿಯಾಗಿದ್ದ. “ಉದಯವಾಗಲಿ ನಮ್ಮ ಚೆಲುವ …