BVK Photos : ಬಿವಿಕೆ ಚಿತ್ರಗಳು

A collection of photographs of Sri BV Kakkilaya’s life and struggles.

ಶ್ರೀ ಬಿವಿ ಕಕ್ಕಿಲ್ಲಾಯರ ಜೀವನದೆಡೆ ಬೆಳಕು ಚೆಲ್ಲುವ ಕೆಲವು ಛಾಯಾಚಿತ್ರಗಳು

B.V. Kakkilaya addressing the protesters in font of the DK DC’s Office on May 18, 2012

ಮೇ 18, 2012 ರಂದು ದಕ ಜಿಲ್ಲಾಧಿಕಾರಿಯವರ ಕಛೇರಿಯ ಮುಂದೆ ಪ್ರತಿಭಟನೆಯಲ್ಲಿ ಭಾಷಣ


Kakkilaya at 92 : ತೊಂಬತ್ತೆರಡರಲ್ಲಿ ಕಕ್ಕಿಲ್ಲಾಯ


Kakkilaya intervening during the Kakkilaya 90 Programme (More here)

ಕಕ್ಕಿಲ್ಲಾಯ 90 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಬಿ.ವಿ. ಕಕ್ಕಿಲ್ಲಾಯ  (ಇನ್ನಷ್ಟು ಚಿತ್ರಗಳು ಹಾಗೂ ವಿವರಗಳು ಇಲ್ಲಿವೆ)

With senior leader of CPI and MP CK Chandrappan on the occasion of Kakkilaya 90

ಕಕ್ಕಿಲ್ಲಾಯ 90 ಕಾರ್ಯಕ್ರಮದ ಸಂದರ್ಭದಲ್ಲಿ ಹಿರಿಯ ಸಿಪಿಐ ನಾಯಕರೂ, ಸಂಸತ್ ಸದಸ್ಯರೂ ಆದ ಸಿ.ಕೆ. ಚಂದ್ರಪ್ಪನ್ ಜೊತೆ

With senior leader of CPI and Comrade K Madhavan on the occasion of Kakkilaya 90

ಕಕ್ಕಿಲ್ಲಾಯ 90 ಕಾರ್ಯಕ್ರಮದ ಸಂದರ್ಭದಲ್ಲಿ ಹಿರಿಯ ಸಿಪಿಐ ನಾಯಕರೂ, ಆಪ್ತ ಸಂಗಾತಿಯೂ ಆದ ಕೆ. ಮಾಧವನ್ ಜೊತೆ

With senior leader of CPI and Comrdae MC Narasimhan on the occasion of Kakkilaya 90

ಕಕ್ಕಿಲ್ಲಾಯ 90 ಕಾರ್ಯಕ್ರಮದ ಸಂದರ್ಭದಲ್ಲಿ ಹಿರಿಯ ಸಿಪಿಐ ನಾಯಕರೂ, ಆಪ್ತ ಸಂಗಾತಿಯೂ ಆದ ಎಂ.ಸಿ. ನರಸಿಂಹನ್ ಜೊತೆ

Felicitation and release of Nirantara, the felicitation volume at Bangalore on March 22, 2009 (More here)

ಮಾರ್ಚ್ 22, 2009 ರಂದು ಬೆಂಗಳೂರಿನಲ್ಲಿ ನಡೆದ ಅಭಿನಂದನಾ ಸಮಾರಂಭ – ‘ನಿರಂತರ’ ಅಭಿನಂದನಾ ಗ್ರಂಥ ಬಿಡುಗಡೆ (ವಿವರಗಳು ಇಲ್ಲಿವೆ)

Chief Minister Kumaraswamy presenting the Suvarna Karnataka Ekikarana Award on Nov 1, 2006; On the right, Kakkilaya with Alavandi Shivamurthy Swami, then President of Akhanda Karnataka Rajya Nirmana Parishat, and B Vishnu Kakkilaya, President, Karnataka Samiti, Kasaragod (More here)

ನವಂಬರ್ 1, 2006ರಂದು ಮಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪ್ರದಾನ. ಬಲಗಡೆಯ ಚಿತ್ರದಲ್ಲಿ, ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಅಧ್ಯಕ್ಷರಾಗಿದ್ದ ಅಳವಂಡಿ ಶಿವಮೂರ್ತಿ ಸ್ವಾಮಿಗಳು (ಕುಳಿತವರು) ಹಾಗೂ ಕರ್ನಾಟಕ ಸಮಿತಿಯ ಅಧ್ಯಕ್ಷರಾದ ವಿಷ್ಣು ಕಕ್ಕಿಲ್ಲಾಯ (ಇನ್ನಷ್ಟು ವಿವರಗಳು ಇಲ್ಲಿವೆ)

Being honoured with Karl Marx Prize on Oct 2, 2010 (More here)

ಅಕ್ಟೋಬರ್ 2, 2010ರಂದು ಕಾರ್ಲ್ ಮಾರ್ಕ್ಸ್ ಪ್ರಶಸ್ತಿ ಪ್ರದಾನ (ವಿವರಗಳು ಇಲ್ಲಿವೆ)

Being honoured by Sri BM Idinabba, noted writer, on behalf of Tulu Sahitya Academy, for his contribution to unification of Karnataka and development of Tulu language and literature on Oct 26, 2006 (More here)

ಅಕ್ಟೋಬರ್ 26, 2006ರಂದು ತುಳು ಸಾಹಿತ್ಯ ಅಕಾಡೆಮಿಯಿಂದ ರಾಜ್ಯದ ಏಕೀಕರಣ ಹಾಗೂ ತುಳು ಭಾಷೆ ಹಾಗೂ ಸಾಹಿತ್ಯಗಳ ಅಭಿವೄದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಸನ್ಮಾನ, ಹಿರಿಯ ಸಾಹಿತಿ ಬಿಎಂ ಇದಿನಬ್ಬರಿಂದ (ವಿವರಗಳು ಇಲ್ಲಿವೆ)

BV Kakkilaya being honoured with Neerpaje Bhima Bhat Prize on Dec 12, 2005

ಬಿ ವಿ ಕಕ್ಕಿಲ್ಲಾಯರಿಗೆ ನೀರ್ಪಾಜೆ ಭೀಮ ಭಟ್ ಪ್ರಶಸ್ತಿ ಪ್ರದಾನ, ಡಿಸೆಂಬರ್12, 2005

With senior leader and former General Secretary of CPI, AB Bardhan.

ಹಿರಿಯ ಸಿಪಿಐ ನಾಯಕರೂ, ಪಕ್ಷದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳೂ ಆದ ಎ.ಬಿ. ಬರ್ಧನ್ ಜೊತೆ

Receiving the momento depicting the image of Com. Krishna Pillai, founder leader of CPI, during the 80th anniversary of CPI

ಪಕ್ಷದ 80ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸ್ಥಾಪಕ ನಾಯಕರಾದ ಸಂ. ಕೃಷ್ಣ ಪಿಳ್ಳೆ ಭಾವಚಿತ್ರವುಳ್ಳ ಸ್ಮರಣಿಕೆಯನ್ನು ಪಡೆಯುತ್ತಿರುವ ಕಕ್ಕಿಲ್ಲಾಯ

With Dr. Addoor Subba Rao, senior leader of CPI, MLA from Manjeshwar and Minister of Cabinet. Kerala Govt., and a close relative.

ಪಕ್ಷದ ಹಿರಿಯ ನಾಯಕರೂ, ಮಂಜೇಶ್ವರ ಕ್ಷೇತ್ರದ ಶಾಸಕರಾಗಿ ಕೇರಳ ಮಂತ್ರಿಮಂಡಲದಲ್ಲಿ ಹಿರಿಯ ಸಚಿವರೂ, ಆಪ್ತ ಬಂಧುಗಳೂ ಆಗಿದ್ದ ಡಾ. ಅಡ್ಡೂರು ಸುಬ್ಬ ರಾವ್ ಜೊತೆ ಕಕ್ಕಿಲ್ಲಾಯ

Ramesh Kumar, former speaker of Karnataka Assembly, releasing Kakkilaya’s autobiography Bareyada Dinachariya Mareyada Putagalu; Kakkilaya speaking on the occasion; with MC Nanaiah and BA Mohidin, senior leaders of Karnataka and close friends.

ಕಕ್ಕಿಲ್ಲಾಯ ಆತ್ಮಕಥೆ ಬರೆಯದ ದಿನಚರಿಯ ಮರೆಯದ ಪುಟಗಳು ಅನ್ನು ಬಿಡುಗಡೆಗೊಳಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್; ಆ ಸಂದರ್ಭದಲ್ಲಿ ಮಾತನಾಡುತ್ತಿರುವ ಕಕ್ಕಿಲ್ಲಾಯ; ರಾಜ್ಯದ ಹಿರಿಯ ನಾಯಕರೂ, ಆಪ್ತ ಮಿತ್ರರೂ ಆದ ಎಂಸಿ ನಾಣಯ್ಯ ಹಾಗೂ ಬಿಎ ಮೊಹಿದ್ದೀನ್ ಜೊತೆ

Kakkilaya participating (far right) in the Hunger Strike in protest against the demolition of Babri Mosque; with him, Sri Narayana Nayak, Suresh Ballal, PV Mohan and others

ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸವನ್ನು ಪ್ರತಿಭಟಿಸಿ ನಡೆಸಲಾದ ಉಪವಾಸ ಸತ್ಯಾಗ್ರಹದಲ್ಲಿ ಕಕ್ಕಿಲ್ಲಾಯ (ಬಲ ತುದಿ) ನಾರಾಯಣ ನಾಯಕ್, ಸುರೇಶ್ ಬಲ್ಲಾಳ್, ಪಿವಿ ಮೋಹನ್, ಮತ್ತಿತರರೂ ಇದ್ದಾರೆ.

With his comrades on the occasions of the DK district and State conferences.

ಪಕ್ಷದ ದಕ ಜಿಲ್ಲೆಯ (ಮೇಲೆ) ಹಾಗೂ ರಾಜ್ಯದ (ಕೆಳಗೆ) ಸಮ್ಮೇಳನಗಳ ಸಂದರ್ಭದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ

Kakkilaya (centre, second row) as the leader of the team that unfurled the national flag at Iddus after forcibly entering during the Goa Liberation Movement, on Aug 15, 1955

ಆಗಸ್ಟ್ 15, 1955 ರಂದು ಗೋವಾದ ಇದ್ದುಸ್ ಗೆ ನುಗ್ಗಿ ರಾಷ್ಟ್ರಧ್ವಜ ಅನಾವರಣಗೊಳಿಸಿದ ಗೋವಾ ವಿಮೋಚನಾ ಸತ್ಯಾಗ್ರಹಿಗಳ ತಂಡದ ನಾಯಕರಾಗಿ ಬಿ.ವಿ. ಕಕ್ಕಿಲ್ಲಾಯ (ಎರಡನೇ ಸಾಲಿನ ನಡುವಿನಲ್ಲಿ ಕುಳಿತವರು)

Kakkilaya addressing May Day Rally; Com Gopi is also seen

ಮೇ ದಿನಾಚರಣೆಯ ಸಂದರ್ಭದಲ್ಲಿ ಭಾಷಣ; ಜೊತೆಗೆ ಸಂಗಾತಿ ಗೋಪಿ

Kakkilaya listening to Senior leader and comrade MS Krishnan addressing May Day Rally. Also seen Simpson Soans, BK Krishnappa, Lingappa Suvarna, Monappa Shetty and others.

ಮೇ ದಿನಾಚರಣೆಯ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರೂ, ಆಪ್ತ ಸಂಗಾತಿಯೂ ಆಗಿದ್ದ ಎಂ.ಎಸ್. ಕೃಷ್ಣನ್ ಭಾಷಣವನ್ನು ಆಲಿಸುತ್ತಿರುವ ಕಕ್ಕಿಲ್ಲಾಯ; ಜೊತೆಗೆ ಸಿಂಪ್ಸನ್ ಸೋನ್ಸ್, ಬಿ.ಕೆ.ಕೃಷ್ಣಪ್ಪ, ಲಿಂಗಪ್ಪ ಸುವರ್ಣ, ಮೋನಪ್ಪ ಶೆಟ್ಟಿ ಮತ್ತಿತರ ಸಂಗಾತಿಗಳು

Kakkilaya translating the speech of Raj Bahddoor Gaur, senior leader of CPI, during Party Conference. Also seen MS Krishnan and Pampapati and others

ಪಕ್ಷದ ಸಮ್ಮೇಳನದಲ್ಲಿ ಹಿರಿಯ ನಾಯಕ ರಾಜ್ ಬಹದ್ದೂರ್ ಗೌರ್ ಭಾಷಣವನ್ನು ತರ್ಜುಮೆ ಮಾಡುತ್ತಿರುವ ಕಕ್ಕಿಲ್ಲಾಯ; ಜೊತೆಗೆ ಎಂ.ಎಸ್. ಕೃಷ್ಣನ್ , ಪಂಪಾಪತಿ ಇನ್ನಿತರರು

BV Kakkilaya, SN Holla and Shantaram Pai, CPI leaders and comrades in arms during the 1950s

1950ರ ದಶಕದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕಾರಾಗಿದ್ದು ಆಪ್ತ ಸಂಗಾತಿಗಳಾಗಿದ್ದ ಬಿ.ವಿ ಕಕ್ಕಿಲ್ಲಾಯ, ಎಸ್.ಎನ್. ಹೊಳ್ಳ ಹಾಗೂ ಶಾಂತಾರಾಂ ಪೈ