ವೇದ ಕಾಲದ ಕಮ್ಯೂನಿಸಂ

ಬಿ.ವಿ. ಕಕ್ಕಿಲ್ಲಾಯರ ದೃಷ್ಟಿಯಲ್ಲಿ ವೇದ ಕಾಲದ ಕಮ್ಯೂನಿಸಂ
ತೈತ್ತರೀಯ ಉಪನಿಷತ್ತಿನ ಈ ಶ್ಲೋಕವನ್ನು ಬಿ.ವಿ. ಕಕ್ಕಿಲ್ಲಾಯರು ಆಗಾಗ ಉದ್ಧರಿಸುತ್ತಿದ್ದರು.

ॐ सह नाववतु ।
सह नौ भुनक्तु ।
सह वीर्यं करवावहै ।
तेजस्वि नावधीतमस्तु मा विद्विषावहै ।
ॐ शान्तिः शान्तिः शान्तिः ॥
ಓಂ ಸಹ ನಾವವತು |
ಸಹನೌ ಭುನಕ್ತು |
ಸಹ ವೀರ್ಯಂ ಕರವಾವಹೈ |
ತೇಜಸ್ವಿ ನಾವಧೀತ ಮಸ್ತು ಮಾ ವಿದ್ವಿಷಾವಹೈ |
ಓಂ ಶಾಂತಿಃ ಶಾಂತಿಃ ಶಾಂತಿಃ||
Om Saha Nau-Avatu |
Saha Nau Bhunaktu |
Saha Viiryam Karava-Avahai |
Tejasvi Nau-Adhii-Tam-Astu Maa Vidviss-Aavahai |
Om Shaantih Shaantih Shaantih ||
ಜೊತೆಗೂಡಿ ಬಾಳೋಣ, (Let’s live together)
ಜೊತೆಗೂಡಿ ಉಣ್ಣೋಣ, (Let’s eat together)
ಜೊತೆಗೂಡಿ ದುಡಿಯೋಣ, (Let’s work together)
ಪರಸ್ಪರ ದ್ವೇಷಿಸದೆ ತೇಜಸ್ವಿಗಳಾಗಿ ಬಾಳೋಣ, (Let’s be enlightened and let there be no hostility)
ಎಲ್ಲೆಡೆ ಶಾಂತಿ ನೆಲೆಗೊಳ್ಳಲಿ || (Let there be peace everywhere)

ಎನ್ನುವುದು ಇದಕ್ಕೆ ಅವರ ವ್ಯಾಖ್ಯೆಯಾಗಿತ್ತು.

ಪ್ರಾಚೀನ ಭಾರತದ ಜೀವನಕ್ರಮಗಳಲ್ಲೂ, ಆ ಕಾಲದ ವೇದೋಪನಿಷತ್ತುಗಳಲ್ಲೂ ಸಾಮುದಾಯಿಕ ಜೀವನದ, ಅಂದರೆ ಪ್ರಾಚೀನ ಕಮ್ಯೂನಿಸಂನ, ಅಸ್ತಿತ್ವವನ್ನು ಕಕ್ಕಿಲ್ಲಾಯರು ಗುರುತಿಸಿದ್ದರು. ಸನಾತನ ಧರ್ಮ ಸ್ಥಾಪನೆಯಾಗಬೇಕೆಂದು ಈಗೀಗ ಬೊಬ್ಬಿರಿಯುವವರಿಗೆ ನಿಜವಾದ ಸನಾತನ ಧರ್ಮವೆಂದರೇನು ಎನ್ನುವುದೇ ತಿಳಿದಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು.