Kakkilaya – 90: Dialogue with the New Generation : ಕಕ್ಕಿಲ್ಲಾಯ – 90: ಹೊಸ ಪೀಳಿಗೆಯೊಂದಿಗೆ ಸಂವಾದ

Kakkilaya – 90: Dialogue with the New Generation
May 30-June 1, 2008
Organsied by: M.S. Krishnan Memorial Trust, Bangalore; Hosathu Monthly, Bangalore, Samdarshi Vedike, Mangalore
Venue: Karnataka Bank Employees’ Auditorium, Bejai-Kapikad, Mangalore 575004

ಕಕ್ಕಿಲ್ಲಾಯ – 90: ಹೊಸ ಪೀಳಿಗೆಯೊಂದಿಗೆ ಸಂವಾದ
ಮೇ 30-ಜೂನ್ 1, 2008
ಸ್ಥಳ: ಕರ್ನಾಟಕ ಬ್ಯಾಂಕ್ ನೌಕರರ ಸಂಘದ ಸಭಾಭವನ, ಬಿಜೈ-ಕಾಪಿಕಾಡ್ ರಸ್ತೆ, ಮಂಗಳೂರು
ಆಯೋಜನೆ: ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ, ಬೆಂಗಳೂರು; ‘ಹೊಸತು’ ಮಾಸ ಪತ್ರಿಕೆ, ಬೆಂಗಳೂರು; ಸಮದರ್ಶಿ ವೇದಿಕೆ, ಮಂಗಳೂರು

On the occasion of Sri B.V. Kakkilaya turning 90 years, a unique felicitation programme titled ‘Kakkilaya 90: Dialogue with the New Generation’ was organised from May 30-June 1, 2008 at Mangalore. As a tribute to his 70 years of struggle with the masses and his services as a freedom fighter, leader of the Communist Party of India, leader of the Karnataka Unification Movement, Member of Rajya Sabha and Karnataka Legislative Assembly etc., the programme included lectures and discussions on various topics such as India’s strugghle for freedom, communalism, Kannada literature and emancipation of women. Renowned thinkers, writers, historians, and leaders of the Communist Party were the resource persons for the thought provoking lectures and discussions thereafter. Sri Kakkilaya participated in all the deliberations very enthusiastically. Get togethers of family members and comrades of Sri Kakkilaya were also held on May 30th.

ನಮ್ಮ ನಾಡಿನ ಹಿರಿಯ ಮುತ್ಸದ್ಧಿ ಶ್ರೀ ಬಿ.ವಿ. ಕಕ್ಕಿಲ್ಲಾಯರು ತೊಂಭತ್ತರ ಹರೆಯಕ್ಕೆ ಕಾಲಿಟ್ಟ ಸಂದರ್ಭದಲ್ಲಿ, 2008ರ ಮೇ 30 ಮತ್ತು ಜೂನ್ 1ರಂದು, ಅವರ ಅಭಿಮಾನಿಗಳು ಮತ್ತು ನೆಂಟರಿಷ್ಟರೆಲ್ಲರೂ ಸೇರಿ ವಿನೂತನವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯ ರೂವಾರಿಗಳಲ್ಲೊಬ್ಬರಾಗಿ, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಸದಸ್ಯರಾಗಿ ಕಳೆದ 70 ವರ್ಷಗಳಲ್ಲಿ ಶ್ರೀ ಬಿ.ವಿ. ಕಕ್ಕಿಲ್ಲಾಯರ ಸೇವೆಯನ್ನು ಮತ್ತು ಜನಪರ ಹೋರಾಟಗಳನ್ನು ನೆನಪಿಸಿಕೊಳ್ಳುತ್ತ, ಕರ್ನಾಟಕದ ಮತ್ತು ರಾಷ್ಟ್ರದ ಪ್ರಸಕ್ತ ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶದಲ್ಲಿ ಇಂದಿನ ಜನಾಂಗದ ಮುಂದಿರುವ ಸವಾಲುಗಳ ಬಗೆಗೆ ಇಂದಿನ ಪೀಳಿಗೆಯೊಂದಿಗೆ ಸಂವಾದವೆನ್ನುವಂತೆ ಈ ಕಾರ್ಯಕ್ರಮವನ್ನು ರೂಪಿಸಲಾಗಿತ್ತು .ಬೆಂಗಳೂರಿನ ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ, ‘ಹೊಸತು’ ಮಾಸ ಪತ್ರಿಕೆ, ಹಾಗೂ ಮಂಗಳೂರಿನ ಸಮದರ್ಶಿ ವೇದಿಕ ಮತ್ತು ಕಕ್ಕಿಲ್ಲಾಯರ ಕುಟುಂಬಸ್ಥರು ಜೊತೆಯಾಗಿ ಆಯೋಜಿಸಿದ್ದ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ದೇಶದ ಖ್ಯಾತ ಚಿಂತಕರು, ಬರಹಗಾರರು, ಇತಿಹಾಸಜ್ಞರು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಎರಡು ದಿನಗಳಲ್ಲೂ ವಿಚಾರಪ್ರದವಾದ ಭಾಷಣಗಳೂ, ಚರ್ಚೆಗಳೂ ನಡೆದವು, ಶ್ರೀ ಕಕ್ಕಿಲ್ಲಾಯರೂ ಅತ್ಯುತ್ಸಾಹದಿಂದ ಅವುಗಳಲ್ಲಿ ಭಾಗಿಯಾಗಿದ್ದರು. ಮುನ್ನಾದಿನ, ಮೇ 30ರಂದು, ಕಕ್ಕಿಲ್ಲಾಯರ ಕುಟುಂಬಸ್ಥರು ಹಾಗೂ ಅವರೊಂದಿಗೆ ದುಡಿದ ಸಂಗಾತಿಗಳ ಪುನರ್ಮಿಲನಗಳನ್ನೂ ಏರ್ಪಡಿಸಲಾಗಿತ್ತು.

Sri PMN Moorthy reminisces ನೆನಪಿನಾಳದಿಂದ ಮಾತು ಬಿಚ್ಚಿಟ್ಟ ಶ್ರೀ ಪಿ ಎಂ ನಾರಾಯಣ ಮೂರ್ತಿ

Sri BV Kakkilaya felicitated by Sri MC Narasimhan and Sri Siddanagowda Patil ಶ್ರೀ ಎಂ ಸಿ ನರಸಿಂಹನ್ ಹಾಗೂ ಶ್ರೀ ಸಿದ್ದನಗೌಡ ಪಾಟೀಲರಿಂದ ಬಿ ವಿ ಕಕ್ಕಿಲ್ಲಾಯರಿಗೆ ಅಭಿನಂದನೆ

Sri Addoor Shivashankar Rao reminisces ನೆನಪಿನಾಳದಿಂದ ಮಾತು ಬಿಚ್ಚಿಟ್ಟ ಶ್ರೀ ಎ ಶಿವಶಂಕರ ರಾವ್

Sri MC Narasimhan speaks ಶ್ರೀ ಎಂ ಸಿ ನರಸಿಂಹನ್ ಭಾಷಣ

Dr. G. Ramakrishna speaks ಡಾ. ಜಿ ರಾಮಕೃಷ್ಣ ಭಾಷಣ

Sri BV Kakkilaya responds ಶ್ರೀ ಬಿ ವಿ ಕಕ್ಕಿಲ್ಲಾಯರ ಪ್ರತಿಕ್ರಿಯೆ

Cultural Programme by IPTA, DK Unit ಇಪ್ಟಾ ದಕ ಜಿಲ್ಲಾ ಘಟಕದ ಸದಸ್ಯರಿಂದ ಕ್ರಾಂತಿಗೀತೆಗಳು

Sri KS Parthasarathy welcomes ಶ್ರೀ ಕೆ ಎಸ್ ಪಾರ್ಥಸಾರಥಿ ಅವರಿಂದ ಸ್ವಾಗತ

Dr. Sumitra Devi speaks on ‘Issues of Liberation in Kannada Literature’ ಡಾ. ಸುಮಿತ್ರಾ ದೇವಿ ಭಾಷಣ: ಆಧುನಿಕ ಕನ್ನಡ ಸಾಹಿತ್ಯ ವಿಮೋಚನೆಯ ಪ್ರಶ್ನೆಗಳನ್ನು ನಿರ್ವಹಿಸಿದ ಬಗೆ

Dr. Rehamat Tarikere speaks on ‘Concepts of Nation and State in Kannada Literature’
ಡಾ. ರಹಮತ್ ತರೀಕೆರೆ ಭಾಷಣ: ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರ ಹಾಗೂ ರಾಜ್ಯದ ಸಂರಚನೆಗಳು

Sri BV Kakkilaya with Sri Subbayya Shetty and Sri BA Moideen, former ministers of Karnataka. ಬಿ ವಿ ಕಕ್ಕಿಲ್ಲಾಯರೊಂದಿಗೆ ಅವರ ಆಪ್ತರಾದ, ಮಾಜಿ ಸಚಿವರಾದ, ಶ್ರೀ ಸುಬ್ಬಯ್ಯ ಶೆಟ್ಟಿ ಹಾಗೂ ಶ್ರೀ ಬಿ ಎ ಮೊಹಿದಿನ್

Sri BV Kakkilaya with his comrades, Sri Sanjeeva Shetty (middle) and Sri Vishwanath Naik. ಸಂಗಾತಿಗಳಾದ ಶ್ರೀ ಸಂಜೀವ ಶೆಟ್ಟಿ (ಮಧ್ಯ) ಹಾಗೂ ಶ್ರೀ ವಿಶ್ವನಾಥ ನಾಯಕ್ ಅವರೊಂದಿಗೆ ಬಿ ವಿ ಕಕ್ಕಿಲ್ಲಾಯರು

Dr. Sabeeha Bhoomigowda speaks on ‘Expressions of Gender and Caste Discrimination in Kannada Literature’. ಡಾ. ಸಬೀಹಾ ಭೂಮಿಗೌಡ ಭಾಷಣ: ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜಾತಿ ಮತ್ತು ಲಿಂಗ ತಾರತಮ್ಯಗಳ ನಿರೂಪಣೆ

Dr. Lingadevaru Halemane speaks on ‘Kannada Literature and Struggles in Karnataka’. ಡಾ. ಲಿಂಗದೇವರು ಹಳೇಮನೆ ಭಾಷಣ: ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಚಳುವಳಿಗಳು

Sri BV Kakkilaya interjects. ಶ್ರೀ ಬಿ ವಿ ಕಕ್ಕಿಲ್ಲಾಯರಿಂದ ಮಧ್ಯ ಪ್ರವೇಶ

Dr. Siddanagowda Patil speaks. ಡಾ. ಸಿದ್ಧನಗೌಡ ಪಾಟೀಲ್ ಭಾಷಣ

Dr. Rajashekhar speaks. ಡಾ. ರಾಜಶೇಖರ್ ಅಧ್ಯಕ್ಷೀಯ ಭಾಷಣ

Dr. Surendra Rao speaks on ‘Whatever happened to our Freedom Struggle?’. ಡಾ ಸುರೇಂದ್ರ ರಾವ್ ಭಾಷಣ: ‘ನಮ್ಮ ಸ್ವಾತಂತ್ರ್ಯ ಚಳುವಳಿಗೇನಾಗಿದೆ?’

Sri CK Chandrappan speaks on ‘Ideals of Freedom Struggle and Post Independence Experience’. ಶ್ರೀ ಸಿ ಕೆ ಚಂದ್ರಪ್ಪನ್ ಭಾಷಣ: ‘ಸ್ವಾತಂತ್ರ್ಯ ಚಳುವಳಿಯ ಆದರ್ಶಗಳು ಮತ್ತು ಸ್ವಾತಂತ್ರ್ಯೋತ್ತರ ಅನುಭವಗಳು’

Sri BV Kakkilaya with his comrade K. Madhavan. ಸಂಗಾತಿ ಕೆ ಮಾಧವನ್ ಜೊತೆ ಬಿ ವಿ ಕಕ್ಕಿಲ್ಲಾಯ

Dr. Kamal Chenoy speaks on ‘From NAM Leadership to Alliance with Imperialism’. ಡಾ. ಕಮಲ್ ಚಿನಾಯ್ ಭಾಷಣ: ‘ಅಲಿಪ್ತ ನಾಯಕತ್ವದಿಂದ ಸಾಮ್ರಾಜ್ಯಶಾಹಿ ಸಖ್ಯದೆಡೆಗೆ’

Dr. Muzzaffar Assadi speaks on ‘Future of Constitutional Guarantees’. ಡಾ. ಮುಜಫರ್ ಅಸ್ಸದಿ ಭಾಷಣ: ಸಾಂವಿಧಾನಿಕ ಭರವಸೆಗಳ ಭವಿಷ್ಯ’

Sri BV Kakkilaya interjects. ಶ್ರೀ ಬಿ ವಿ ಕಕ್ಕಿಲ್ಲಾಯರಿಂದ ಮಧ್ಯ ಪ್ರವೇಶ

Sri Praful Bidwai interjects. ಶ್ರೀ ಪ್ರಫುಲ್ ಬಿದ್ವಾಯಿ ಅವರಿಂದ ಮಧ್ಯ ಪ್ರವೇಶ

Dr. GV Joshi speaks on ‘Indian Economic Growth: Exclusive-Inclusive Logjam’. ಡಾ ಜಿ ವಿ ಜೋಷಿ ಭಾಷಣ: ಭಾರತದ ಆರ್ಥಿಕ ಅಭಿವೃದ್ಧಿ: ರಹಿತ-ಸಹಿತರ ಕಗ್ಗಂಟು’

Dr. Sanjay Biswas interjects. ಡಾ ಸಂಜಯ್ ಬಿಸ್ವಾಸ್ ಅವರಿಂದ ಮಧ್ಯ ಪ್ರವೇಶ

Cultural Programme presented by Aayana, Mangalore ಮಂಗಳೂರಿನ ಆಯನ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ

Sri Praful Bidwai speaks on ‘Economic and Political Roots of Communalism’. ಶ್ರೀ ಪ್ರಫುಲ್ ಬಿದ್ವಾಯಿ ಭಾಷಣ: ‘ಕೋಮುವಾದದ ಆರ್ಥಿಕ ಹಾಗೂ ರಾಜಕೀಯ ಬೇರುಗಳು’

Sri Shameem Fyzee speaks on ‘State, Civil society and Politics of communalism in India’. ಶ್ರೀ ಶಮೀಮ್ ಫೈಜಿ ಭಾಷಣ: ‘ರಾಜ್ಯ, ಸಮಾಜ ಮತ್ತು ಭಾರತದಲ್ಲಿ ಕೋಮುವಾದದ ರಾಜಕೀಯ’

Dr. Phaniraj speaks on Anatomy of Communal Violence in Karnataka. ಡಾ ಫಣಿರಾಜ್ ಭಾಷಣ: ‘ಕರ್ನಾಟಕದಲ್ಲಿ ಕೋಮುವಾದದ ಸ್ವರೂಪ’

Smt. Sara Aboobakar’s presidential remarks on Combating Communalism and Terrorism. ಶ್ರೀಮತಿ ಸಾರಾ ಅಬೂಬಕರ್ ಅಧ್ಯಕ್ಷೀಯ ಭಾಷಣ: ‘ಕೋಮುವಾದ ಮತ್ತು ಭಯೋತ್ಪಾದನೆಯನ್ನು ಎದುರಿಸುವ ಬಗೆ’

Sri BV Kakkilaya felicitated by Sri MC Narasimhan and Sri Shammem Fyzee on behalf of CPI, Davanagere. ಭಾರತ ಕಮ್ಯೂನಿಸ್ಟ್ ಪಕ್ಷದ ದಾವಣಗೆರೆ ಘಟಕದ ಪರವಾಗಿ ಶ್ರೀ ಎಂಸಿ ನರಸಿಂಹನ್ ಹಾಗೂ ಶ್ರೀ ಶಮೀಮ್ ಫೈಜಿ ಅವರಿಂದ ಕಕ್ಕಿಲ್ಲಾಯರಿಗೆ ಅಭಿನಂದನೆ

Sri BV Kakkilaya responds. ಶ್ರೀ ಬಿ ವಿ ಕಕ್ಕಿಲ್ಲಾಯರ ಪ್ರತಿಕ್ರಿಯೆ

Dr. N. Gayathri speaks. ಡಾ ಎನ್ ಗಾಯತ್ರಿ ಭಾಷಣ

Dr. TR Chandrashekhara speaks on Governmental Plans and Programmes for Women. ಡಾ ಟಿ ಆರ್ ಚಂದ್ರಶೇಖರ್ ಭಾಷಣ: ಮಹಿಳೆಯರನ್ನು ಕುರಿತ ಸರಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳು

Dr. Sudha Seetharam speaks on Women’s Studies in the Field of Education. ಡಾ ಸುಧಾ ಸೀತಾರಾಮನ್ ಭಾಷಣ: ಶಿಕ್ಷಣ ಕ್ಷೇತ್ರದಲ್ಲಿ ಮಹಿಳಾ ಅಧ್ಯಯನ

Dr. Vijaya presides the session on Changing Trends in Women’s Movements and Studies. ಡಾ ವಿಜಯಾ ಅಧ್ಯಕ್ಷೀಯ ಭಾಷಣ: ಪರಿವರ್ತನೆಯ ಹಾದಿಯಲ್ಲಿ ಮಹಿಳಾ ಚಳುವಳಿ ಮತ್ತು ಅಧ್ಯಯನ

Sri MC Narasmihan speaks on Social Justice, Legal system and the decreasing space for Democratic Expression. ಶ್ರೀ ಎಂ ಸಿ ನರಸಿಂಹನ್ ಭಾಷಣ: ಸಾಮಾಜಿಕ ನ್ಯಾಯ, ಕಾನೂನು ವ್ಯವಸ್ಥೆ ಮತ್ತು ಸೊರಗುತ್ತಿರುವ ಪ್ರಜಾಸತ್ತಾತ್ಮಕ ಅಭಿವ್ಯಕ್ತಿ

 ವರದಿಗಳು :: Reports: Deccan Herald ।್ Daiji World ।್ Daiji World