BVK Orations 2013

Sri P. Sainath, Rural Affairs Editor of The Hindu and recipient of the prestigious Ramon Magsaysay award, delivered the inaugural BV Kakkilaya Inspired Orations – 2013 on Sep 7, 2013 at Mangalore. His first oration at Mangalagangotri, Mangalore Univeristy was titled Reporting Rural India and the second one, at Raveendra Kalabhavana, University College, Mangalore, was titled Corporate Hijack of Indian Agriculture. Sri P Sainath is well known for his ground level research and reporting of the poverty and problems of rural India, especially the agrarian crisis and farmers’ suicides, following globalization. He has been hailed as “one of the world’s great experts on famine and hunger” by the likes of Nobel laureate Sri Amartya Sen.

BV Kakkilaya Inspired Orations 2013 :: ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳು 2013

Reporting Rural India: P. Sainath

Corporate Hijack of Indian Agriculture: P. Sainath

The first oration by Sri P Sainath, titled Reporting Rural India, was delivered at 11 am at the Old Senate Hall, Mangalagangotri, Mangalore University. The jam packed audience, that had participants from Dakshina Kannada, Udupi, Kasaragod and Calicut, heard him spell bound, and was indeed inspired by Sainath’s lecture. Rural India that is home to 850 million people never ceases to surprise, said Sainath. He advised reporters to make compelling reports out of grave problems of our people rather than run behind stories that are perceived to be compelling. In India, a country known story telling traditions such as Hari Kathas and Burra Kathas, one should make every effort to find and narrate the stories of rural India, he said. Narrating examples of borewell drilling across India that is dependent on a handful of contractors from a tiny village Tiruchengode in Tamilnadu,  Sainath explained how a reporter can unearth interesting facts from what appears to be a bland material. Using that narrative, Sainath dealt in detail on the water crisis across the country and pointed at the stark contradictions of luxury apartments with in-house swimming pools standing very net to parched villages where common people do not even have a drop of water to drink.  Sainath advised the reporters not to get disappointed if some of these difficult stories fail to find space in the media, and urged them to find ways of publishing what they believe in.

Prof. Jayaraj Amin of the Dept. of Political Scince welcomed and Prof. GP Shivaram of the Dept of Mass Media and Communications proposed the vote of thanks. Dr Surendra Rao presented the memento to Sri Sainath.

The second lecture, titled Corporate Hijack of Indian Agriculture was delivered by him at 4 pm at Ravindra Kalabhavana,University College, Hampanakkatta, Mangalore. Providing statistics, Sainath described how 6 multinational corporations are controlling the entire food and agriculture sector all across the globe, from forcing farmers what to sow, providing seeds, fertilizers, pesticides etc., at exhorbitant prices and then fixing the prices for the farm products, buying, marketing and processing the food products. Pointing out that today’s farmers have no control on what their own activities, Sainath blamed the switching over to cash crops from food crops, under the directions of the multinationals, to be the most important reason for the suicides of nearly 3 lakh people over the past 2 decades in India. Detailing the proposed Million Farmers’ Initiative, a PPP model envisaged under the Rashtriya Krishi Vikas Yojana, Sainath warned that Rs 7000 crores will be handed over to half a dozen big corporates of the country and millions of farmers will be made subservient to these companies. As a result, in the days ahead, we would have ITC farmers, Reliance farmers, Tata farmers, Birla farmers etc., who would be directed by Wharton trained MBAs; a farmer in south Tamil Nadu would be instructed by a Kolkata based MBA on how to grow Ragi, something the farmer has been growing for the past 2000 years. Calling for mass resistance to Corporate take-over of agriculture, Sainath saw great hope in many such mass uprisings all across the world – from Egypt to Europe to anti land grabbing agitations in Orissa and other parts of India.

Welcoming everyone, Dr Srinivas Kakkilaya explained that the purpose of BV Kakkilaya Inspired Orations was to stimulate thought and action on the pressing problems of more than 85% of our people at a time when public discourse is largely restricted to cash and comforts, cattle and communal hatred, issues that are irrelevant to the large sections who have no access to any of these and whose mouths cannot be fed with religious actions of any kind. GN Mohan introduced P Sainath and later, Bara Andre Ellarigoo Ishta, 3rd Edition of Kannada translation of Sainath’s book Everybody Loves a Good Drought was released by Sri K. Phaniraj. Sri Jeevandas Ammunje, a farmer himself, and Dr Siddanagouda Patil, Editor of Hosatu Monthly, presented a souvenir crafted by Sri Jagadish Ammunje that depicted a plough with a nib at its tip, symbolising the very work of Sri P Sainath of ploughing up truths from India’s farms and reporting it to the world.

BV Kakkilaya Inspired Orations have been initiated this year  to promote alternative thought and approach to the problems of the suffering masses of our country, as a tribute to his life and work of Sri BV Kakkilaya, (1919-2012) a freedom fighter, leader of Karnataka unification movement, member of the first Rajya Sabha and Karnataka State Assembly, award winning writer and thinker. The inaugural BV Kakkilaya Inspired Orations 2013 were organized by Hosatu Monthly, Bangalore, MS Krishnan Trust, Bangalore, and Samadarshi Vedike, Mangalore, in association with Abhinava, Bangalore.

‘ದಿ ಹಿಂದು’ ಪತ್ರಿಕೆಯ ಗ್ರಾಮೀಣ ವಿಷಯಗಳ ಸಂಪಾದಕರೂ, ಪ್ರತಿಷ್ಠಿತ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರೂ ಆದ ಶ್ರೀ ಪಿ.ಸಾಯಿನಾಥ್ ಅವರು ಶನಿವಾರ, ಸೆಪ್ಟೆಂಬರ್ 7, 2013ರಂದು ಮಂಗಳೂರಿನಲ್ಲಿ ಮೊತ್ತ ಮೊದಲ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳನ್ನು ನೀಡಿದರು. ಪಿ ಸಾಯಿನಾಥ್ ಅವರು ದೇಶದ ಗ್ರಾಮೀಣ ಭಾಗಗಳಲ್ಲಿ ಬಡತನ ಮತ್ತಿತರ ಸಮಸ್ಯೆಗಳ ಬಗ್ಗೆ, ಅದರಲ್ಲೂ ಮುಖ್ಯವಾಗಿ ರೈತರ ಆತ್ಮಹತ್ಯೆ, ಕೃಷಿ ಕ್ಷೇತ್ರದ ಸಂಕಷ್ಟಗಳು ಹಾಗೂ ಜಾಗತೀಕರಣದಿಂದ ಅವುಗಳ ಮೇಲಾಗಿರುವ ಪರಿಣಾಮಗಳ ಬಗ್ಗೆ, ತಳಮಟ್ಟದ ಅಧ್ಯಯನಗಳನ್ನು ನಡೆಸಿ ಬಹಳ ವಿಸ್ತೃತವಾಗಿ ವರದಿ ಮಾಡಿರುವ ಹೆಗ್ಗಳಿಕೆಯುಳ್ಳವರಾಗಿದ್ದು, ನೊಬೆಲ್ ಪ್ರಶಸ್ತಿ ವಿಜೇತರಾದ ಶ್ರೀ ಅಮರ್ತ್ಯ ಸೆನ್ ಅಂಥವರಿಂದ “ಹಸಿವು ಹಾಗೂ ಬರಗಾಲಗಳ ಬಗ್ಗೆ ಜಾಗತಿಕ ಮಟ್ಟದ ತಜ್ಞರಲ್ಲೊಬ್ಬರು” ಎಂಬ ಪ್ರಶಂಸೆಗೆ ಪಾತ್ರರಾದವರಾಗಿದ್ದಾರೆ.

ಗ್ರಾಮೀಣ ಭಾರತದ ವರದಿಗಾರಿಕೆ ಕುರಿತಾದ ಶ್ರೀ ಸಾಯಿನಾಥ್ ಅವರ ಮೊದಲ ಉಪನ್ಯಾಸವು ಪೂರ್ವಾಹ್ನ 11 ಗಂಟೆಗೆ ಮಂಗಳೂರು ವಿವಿಯ ಮಂಗಳಗಂಗೋತ್ರಿಯ ಹಳೆಯ ಸೆನೆಟ್ ಸಭಾಂಗಣದಲ್ಲಿ ನಡೆಯಿತು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಕಲ್ಲಿಕೋಟೆಗಳಿಂದ ಆಗಮಿಸಿದ್ದ ಆಸಕ್ತರಿಂದ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಸಾಯಿನಾಥ್ ಅವರ ನಿರರ್ಗಳವಾದ ಉಪನ್ಯಾಸವು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು ಮಾತ್ರವಲ್ಲ, ಹೊಸ ಆಶಯಗಳ ಕಿಡಿಯನ್ನೂ ಹೊತ್ತಿಸಿತು.  ನಮ್ಮ ದೇಶದ 85 ಕೋಟಿ ಜನ ವಾಸವಾಗಿರುವ ಹಳ್ಳಿಗಳಲ್ಲಿ ಅಚ್ಚರಿಯ ವರದಿಗಳು ಯಾವತ್ತೂ ಕಾಯುತ್ತಿರುತ್ತವೆ ಎಂದ ಸಾಯಿನಾಥ್, ಆಕರ್ಷಕವೆನಿಸಬಹುದೆಂದು ಭಾವಿಸುವ ವರದಿಗಳ ಹಿಂದೆ ಓಡಾಡುವುದಕ್ಕಿಂತ ದೇಶದ ಜನತೆಯನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಆಕರ್ಷಕವಾದ ವರದಿಗಳನ್ನು ತಯಾರಿಸುವತ್ತ ಪತ್ರಕರ್ತರು ಗಮನ ಹರಿಸಬೇಕಾಗಿದೆ ಎಂದು ಸಲಹೆಯಿತ್ತರು. ಹರಿಕಥೆ, ಬುರಾಕಥೆ ಮುಂತಾದ ಕಥೆ ಹೇಳುವ ಸಂಪ್ರದಾಯಗಳಿರುವ ಭಾರತದ ವರದಿಗಾರರು ಗ್ರಾಮೀಣ ಪ್ರದೇಶದ ಕಥೆಗಳನ್ನು ಅಗೆದು ವರದಿ ಮಾಡುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಾಯಿನಾಥ್ ಕಿವಿಮಾತು ಹೇಳಿದರು. ದೇಶದೆಲ್ಲೆಡೆ ಕೊಳವೆಬಾವಿಗಳನ್ನುಉ ಕೊರೆಯುವ ಗುತ್ತಿಗೆದಾರರು ತಮಿಳುನಾಡಿನ ಪುಟ್ಟ ಊರಾದ ತಿರುಚೆಂಗೋಡಿನಿಂದಲೇ ಹೊರಡುತ್ತರೆನ್ನುವ ಕೌತುಕವನ್ನು ತಾನು ಕಂಡುಕೊಂಡ ಪರಿಯನ್ನು ವಿವರಿಸಿದ ಸಾಯಿನಾಥ್, ಸಪ್ಪೆಯೆನಿಸುವ ವಿಚಾರಗಳಲ್ಲೂ ಬಹಳಷ್ಟು ರೋಚಕ ಸಂಗತಿಗಳು ಅಡಗಿರುವುದನ್ನು ಪತ್ತೆ ಹಚ್ಚಬಹುದೆಂದು ವಿವರಿಸಿದರು. ಕೊಳವೆಬಾವಿಗಳ ಈ ದೃಷ್ಟಾಂತವನ್ನು ಉದ್ಧರಿಸಿ ದೇಶದಲ್ಲಿ ಬಿಗಡಾಯಿಸುತ್ತಿರುವ ಜಲಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದಲ್ಲದೆ, ಮಹಾರಾಷ್ಟ್ರದ ಮಹಾನಗರಗಳಲ್ಲಿ ಖಾಸಗಿ ಈಜುಕೊಳಗಳುಳ್ಳ ಐಷಾರಾಮಿ ವಸತಿ ಸಂಕೀರ್ಣಗಳು ತಲೆಯೆತ್ತುತ್ತಿದ್ದರೆ ಅವುಗಳ ಇನ್ನೊಂದು ಮಗ್ಗುಲಲ್ಲಿ ಕುಡೀಯುವುದಕ್ಕೂ ಹನಿನೀರಿಲ್ಲದೆ ಜನರು ಪರದಾಡುತಿರುವ ದಾರುಣ ಸ್ಥಿತಿಯನ್ನು ಸಾಯಿನಾಥ್ ಕಟ್ಟಿಕೊಟ್ಟರು. ಗ್ರಾಮೀಣ ಪ್ರದೇಶಗಳ ಇಂತಹಾ ಬವಣೆಗಳನ್ನು ವರದಿ ಮಾಡುವುದಕ್ಕೆ ಪತ್ರಕರ್ತರಿಗೆ ಸೂಕ್ತವಾದ ಸ್ಥಳಾವಕಾಶ ದೊರೆಯದಿದ್ದರೆ ಎದೆಗುಂದಬೇಕಾಗಿಲ್ಲವೆಂದ ಸಾಯಿನಾಥ್, ಅಂತಹ ದಿಟ್ಟ ವರದಿಗಳನ್ನು ತಾವೇ ಪ್ರಕಟಿಸುವ ಸಾಧ್ಯತೆಗಳತ್ತ ಗಮನ ಹರಿಸಬೇಕೆಂದು ಸಲಹೆಯಿತ್ತರು.

ಮೊದಲಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರೊ. ಜಯರಾಜ್ ಅಮೀನ್ ಸ್ವಾಗತಿಸಿದರೆ, ಕೊನೆಗೆ ಸಮೂಹ ಮಾಧ್ಯಮ ವಿಭಾಗದ ಪ್ರೊ. ಶಿವರಾಂ ವಂದಿಸಿದರು. ಡಾ. ಸುರೇಂದ್ರ ರಾವ್ ಅವರು ಸಾಯಿನಾಥ್ ಅವರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು.

ಉದ್ಯಮಶಾಹಿಯಿಂದ ಅಪಹೃತಗೊಂಡಿರುವ ಭಾರತದ ಕೃಷಿ ಕ್ಷೇತ್ರ ಎಂಬ ಸಾಯಿನಾಥ್ ಅವರ ಎರಡನೆಯ ಉಪನ್ಯಾಸವು ಸಂಜೆ 4 ಗಂಟೆಗೆ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು. ಆರು ಬಹುರಾಷ್ಟ್ರೀಯ ದೈತ್ಯ ಕಂಪೆನಿಗಳು ಭಾರತವೂ ಸೇರಿದಂತೆ ಇಡೀ ವಿಶ್ವದ ಆಹಾರ ಹಾಗೂ ಇನ್ನಿತರ ಕೃಷಿಕ್ಷೇತ್ರವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿವೆಯೆನ್ನುವುದನ್ನು ಸಾಯಿನಾಥ್ ಅಂಕಿ-ಅಂಶಗಳೊಂದಿಗೆ ವಿವರಿಸಿದರು. ಇಂದು ಕೃಶಃಇಕರಿಗೆ ತಾವು ಬಿತ್ತಿ ಬೆಳೆದು ಮಾರುವುದಕ್ಕೆ ಯಾವುದೇ ಸ್ವಾತಂತ್ರ್ಯವಿಲ್ಲ ಈನುವುದನ್ನು ವಿವರಿಸುತ್ತಾ, ಕೃಷಿಕನಾದವನು ತನ್ನ ನೆಲದಲ್ಲಿ ಏನನ್ನು ಬೆಳೆಯಬೇಕು, ಯಾವ ಬೀಜಗಳನ್ನು ಬಿತ್ತಬೇಕು, ಯಾವ ಗೊಬ್ಬರಗಳನ್ನೂ, ಕೀಟನಾಶಕಗಳನ್ನೂ ಬಳಸಬೇಕು ಎನ್ನುವುದನ್ನು ನಿರ್ಧರಿಸುವುದಲ್ಲದೆ ಈ ಎಲ್ಲಾ ಪದಾರ್ಥಗಳಿಗೂ ವಿಪರೀತವಾಗಿ ಬೆಲೆಯಿಟ್ಟು, ಕೊನೆಗೆ ರೈತರು ಬೆಳೆದ ಬೆಳೆಗಳನ್ನು ಚಿಕ್ಕಾಸಿಗೆ ಖರೀದಿಸಿ, ಸಂಸ್ಕರಿಸಿ, ತಮಗಿಷ್ಟ ಬಂದ ಬೆಲೆಗೆ ಮಾರುವ ಈ ದೈತ್ಯ ಕಂಪೆನಿಗಳ ಕುಟಿಲ ವ್ಯವಸ್ಥೆಯನ್ನು ಸಾಯಿನಾಥ್ಥ್ ಬಿಚ್ಚಿಡುತ್ತಿದ್ದಂತೆ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದವರೆಲ್ಲ ಸ್ಥಂಭೀಭೂತರಾಗಬೇಕಾಯಿತು. ಇಂದು ರೈತರಿಗೆ ತಾವೇನು ಬೆಳೆಯಬೇಕೆನ್ನುವ ಸ್ವಾತಂತ್ರ್ಯವಿಲ್ಲದೆ, ಈ ಬಹುರಾಷ್ಟ್ರೀಯ ಕಂಪೆನಿಗಳ ಆಣತಿಯಂತೆ ಆಹಾರಬೆಳೆಗಳ ಬದಲಿಗೆ ನಗದುಬೆಳೆಗಳತ್ತ ತಿರುಗಿರುವುದೇ ಕಳೆದೆರಡು ದಶಕಗಳಲ್ಲಿ ಮೂರು ಲಕ್ಷ ರೈತರ ಆತ್ಮಹತ್ಯೆಗೆ ಅತಿಮುಖ್ಯ ಕಾರಣ ಎನ್ನುವುದನ್ನು ಸಾಯಿನಾಥ್ ವಿವರಿಸಿದರು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಪ್ರಸ್ತಾವಿತವಾಗಿರುವ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ದಶಲಕ್ಷ ರೈತರ ಉಪಕ್ರಮದ ಬಗ್ಗೆ ವಿವರಿಸಿದ ಸಾಯಿನಾಥ್, ಈ ಯೋಜನೆಯಲ್ಲಿ ತೆರಿಗೆದಾರರ ಏಳು ಸಾವಿರ ಕೋಟಿ ಹಣವನ್ನು ಆರೇಳು ಖಾಸಗಿ ಕಂಪೆನಿಗಳಿಗೆ ಕೊಟ್ಟು ದೇಶದ ರೈತರನ್ನು ಅವರ ಅಡಿಯಾಳುಗಳನ್ನಾಗಿಸಲಾಗುತ್ತದೆ ಎಂದರಲ್ಲದೆ ನಮ್ಮ ರೈತರು ಮುಂದಿನ ದಿನಗಳಲ್ಲಿ ಐಟಿಸಿ ರೈತರು, ರಿಲಯನ್ಸ್ ರೈತರು, ಟಾಟಾ ರೈತರು, ಬಿರ್ಲಾ ರೈತರು ಮುಂತಾಗಿ ವಿಭಜಿಸಲ್ಪಡಲಿದ್ದಾರೆಂದೂ,  ಕೊಲ್ಕಾತ್ತಾದಲ್ಲಿ ಕುಳಿತ ವಾರ್ಟನ್ ಶಿಕ್ಷಿತ ಎಂಬಿಎ ಅಧಿಕಾರಿಯೊಬ್ಬ ದಕ್ಷಿಣ ತಮಿಳುನಾಡಿನಲ್ಲಿ ಕಳೆದ ಎರಡು ಸಾವಿರ ವರ್ಷಗಳಿಂದಲೂ ರಾಗಿಯನ್ನು ಬೆಳೆಯುವ ಪರಂಪರೆಯುಳ್ಳ ರೈತರಿಗೆ ರಾಗಿ ಬೆಳೆಯುವುದು ಹೇಗೆನ್ನುವುದನ್ನು ಕಲಿಸಿಕೊಡುವಂತಹ ಸನ್ನಿವೇಶವನ್ನು ನಿರ್ಮಿಸಲಾಗುತ್ತಿದೆಯೆಂದೂ ಎಚ್ಚರಿಸಿದರು.  ಕೃಷಿಕ್ಷೇತ್ರವನ್ನು ಉದ್ಯಮಶಾಹಿಯ ಕಪಿಮುಷ್ಟಿಯಿಂದ ವಿಮೋಚನೆಗೊಳಿಸುವ ಹೋರಾಟವು ಬಲಗೊಳ್ಳುವುದರಲ್ಲೇ ಮನುಕುಲದ ಭವಿಷ್ಯವಿದೆ ಎಂದ ಸಾಯಿನಾಥ್, ಈಜಿಪ್ಟಿನಿಂದ ಯೂರೋಪಿನವರೆಗೆ ಹರಡಿರುವ ಹಸಿದವರ ದಂಗೆಗಳೂ, ನಮ್ಮ ಒಡಿಷಾ ಮತ್ತಿತರೆಡೆಗಳಲ್ಲಿ ಬಲಗೊಳ್ಳುತ್ತಿರುವ ಭೂಸ್ವಾಧೀನ ವಿರೋಧಿ ಹೋರಾಟಗಳೂ ನಮ್ಮ ಭವಿಷ್ಯದ ಆಶಾಕಿರಣಗಳಾಗಿವೆ ಎಂದರು.

ಮೊದಲು ಪ್ರಸ್ತಾವನೆಗೈದು ಸ್ವಾಗತಿಸಿದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು, ಇಂದು ಸಾರ್ವಜನಿಕ ಸಂವಾದಗಳು ಕೇವಲ ಧನ, ದನ ಹಾಗೂ ಧರ್ಮಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದು, ಧನ ಗಳಿಸಲಾಗದ, ದನ ಸಾಕಲಾಗದ, ಧರ್ಮವನ್ನು ನೆಚ್ಚಿ ಹೊಟ್ಟೆ ಹೊರೆಯಲಾಗದ ದೇಶದ ಶೇ. 85ಕ್ಕೂ ಹೆಚ್ಚು ಜನರ ಸಮಸ್ಯೆಗಳ ಬಗ್ಗೆ ಚಿಂತನೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳನ್ನು ಏರ್ಪಡೀಸಲಾಗುತ್ತಿದೆ ಎಂದರು. ಜಿಎನ್ ಮೋಹನ್ ಅವರು ಸಾಯಿನಾಥ್ ಅವರನ್ನು ಪರಿಚಯಿಸಿದರು. ನಂತರ ಶ್ರೀ ಸಾಯಿನಾಥ್ ಬರೆದ ಬರ ಅಂದ್ರೆ ಎಲ್ಲರಿಗೂ ಇಷ್ಟ ಎಂಬ ಪುಸ್ತಕದ ಕನ್ನಡ ಅನುವಾದದ ಮೂರನೇ ಆವೃತ್ತಿಯನ್ನು ಶ್ರೀ ಕೆ. ಫಣಿರಾಜ್ ಅವರು ಬಿಡುಗಡೆಗೊಳಿಸಿದರು. ಕೃಶಃಇಕರಾದ ಶ್ರೀ ಜೀವನದಾಸ್ ಅಮ್ಮುಂಜೆ ಹಾಗೂ ಹೊಸತು ಪತ್ರಿಕೆಯ ಸಂಪಾದಕರಾದ ಡಾ. ಸಿದ್ದನಗೌಡ ಪಾಟೀಲರು ಶ್ರೀ ಪಿ ಸಾಯಿನಾಥ್ ಅವರಿಗೆ ಸ್ಮರಣೀಕೆಯನ್ನಿತ್ತು ಗೌರವಿಸಿದರು. ಶ್ರೀ ಜಗದೀಶ್ ಅಮ್ಮುಂಜೆ ರೂಪಿಸಿದ ಈ ವಿಶೇಷ ಸ್ಮರಣಿಕೆಯು ನೇಗಿಲಿನ ತುದಿಯಲ್ಲಿ ಲೇಖನಿಯನ್ನು ಹೊಂದಿದ್ದು, ದೇಶದ ಹೊಲಗಳಲ್ಲಿ ಅಡಗಿರುವ ಸತ್ಯಗಳನ್ನು ಮೇಲೆತ್ತಿ ವರದಿ ಮಾಡುವ ಶ್ರೀ ಸಾಯಿನಾಥ್ ಅವರ ಕೆಲಸವನ್ನು ಬಹು ಚೆನ್ನಾಗಿ ನಿರೂಪಿಸುವಂತಿತ್ತು.

ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರು, ಪ್ರಶಸ್ತಿ ವಿಜೇತ ಲೇಖಕರು ಹಾಗೂ ಚಿಂತಕರಾಗಿದ್ದ ಶ್ರೀ ಬಿವಿ ಕಕ್ಕಿಲ್ಲಾಯರ (1919-2012) ಗೌರವಾರ್ಥ, ದೇಶದ ಬಹು ಪಾಲು ಜನರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪರ್ಯಾಯ ಚಿಂತನೆಯನ್ನೂ, ಮಾರ್ಗೋಪಾಯಗಳನ್ನೂ ಪ್ರಚೋದಿಸುವ ಉದ್ದೇಶದಿಂದ ಪ್ರತೀ ವರ್ಷವೂ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳನ್ನು ಸಂಘಟಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು, ಈ ವರ್ಷದ ಉಪನ್ಯಾಸಗಳನ್ನು ಬೆಂಗಳೂರಿನ ಹೊಸತು ಮಾಸ ಪತ್ರಿಕೆ ಹಾಗೂ ಎಂಎಸ್ ಕೃಷ್ಣನ್ ಟ್ರಸ್ಟ್ ಮತ್ತು ಮಂಗಳೂರಿನ ಸಮದರ್ಶಿ ವೇದಿಕೆ ಆಯೋಜಿಸಿದ್ದು, ಬೆಂಗಳೂರಿನ ಅಭಿನವ ಸಂಸ್ಥೆಯ ಸಹಯೋಗವಿತ್ತು.

ಅವಧಿಯಲ್ಲಿ ಸಾಯಿನಾಥ್ ಫೋಟೋ ಆಲ್ಬಂ

sainath1sainath2sainath3sainath4sainath5sainath6sainath7sainath8sainath9sainath10sainath11sainath12sainath13

ಚಿತ್ರಗಳು: ಯಜ್ಞ, ಮಂಗಳೂರು | Photos by Yajna, Mangalore

See Reports: