Suvarna Karnataka Ekikarana Award : ಸುವರ್ಣ ಏಕೀಕರಣ ಪುರಸ್ಕಾರ

Sri BV Kakkilaya Honoured with Suvarna Karnataka Ekikarana Award : ಶ್ರೀ ಬಿ ವಿ ಕಕ್ಕಿಲ್ಲಾಯರಿಗೆ ಸುವರ್ಣ ಏಕೀಕರಣ ಪುರಸ್ಕಾರ

[dropcap]ಕ[/dropcap]ರ್ನಾಟಕ ರಾಜ್ಯದ ಏಕೀಕರಣದ ಸುವರ್ಣ ವರ್ಷಾಚರಣೆಯ ಉದ್ಘಾಟನೆಯ ಸಂದರ್ಭದಲ್ಲಿ ನವಂಬರ್ 1, 2006ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಎಚ್ ಡಿ ಕುಮಾರಸ್ವಾಮಿಯವರು ಶ್ರೀ ಬಿ ವಿ ಕಕ್ಕಿಲ್ಲಾಯರನ್ನು ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಶ್ರೀ ಬಿ ವಿ ಕಕ್ಕಿಲ್ಲಾಯರು ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾಗಿ ಕರ್ನಾಟಕ ರಾಜ್ಯದ ಏಕೀಕರಣಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ಈ ಗೌರವವನ್ನು ನೀಡಲಾಯಿತು. ಶ್ರೀ ಕಕ್ಕಿಲ್ಲಾಯರು 1952-1954ರ ಅವಧಿಯಲ್ಲಿ ರಾಜ್ಯ ಸಭೆಯ ಸದಸ್ಯರಾಗಿದ್ದು, ಅಲ್ಲಿಯೂ, ಇನ್ನಿತರ ವೇದಿಕೆಗಳಲ್ಲೂ ಕರ್ನಾಟಕ ಏಕೀಕರಣದ ಧ್ವನಿಯನ್ನು ಮೊಳಗಿಸಿದ್ದರು, ಅದಕ್ಕಾಗಿ ನಿರಂತರವಾಗಿ ಹೋರಾಡಿದ್ದರು.

Sri H.D. Kumaraswamy, Chief Minister of Karnataka, honouring Sri B.V. Kakkilaya ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್ ಡಿ ಕುಮಾರಸ್ವಾಮಿಗಳಿಂದ ಶ್ರೀ ಬಿವಿ ಕಕ್ಕಿಲ್ಲಾಯರಿಗೆ ಪ್ರಶಸ್ತಿ ಪ್ರದಾನ (Photo courtesy Karnataka Photo News/Udayavani)

The award included a citation, a gold medal and a shawl. ಶ್ರೀ ಕಕ್ಕಿಲ್ಲಾಯರನ್ನು ಶಾಲು ಹೊದಿಸಿ, ಮಾನಪತ್ರ ಹಾಗೂ ಚಿನ್ನದ ಪದಕ ಗಳನ್ನು ನೀಡಿ ಗೌರವಿಸಲಾಯಿತು.

Sri Alavandi Shivamurthy Swamy, the President of the Akhanda Karnataka Rajya Nirmana Parishat and a member of the Loka Sabha during the period, was also honoured on the occasion.

ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಅಧ್ಯಕ್ಷರೂ, ಆ ಕಾಲದಲ್ಲಿ ಲೋಕಸಭೆಯ ಸದಸ್ಯರೂ ಆಗಿದ್ದ ಶ್ರೀ ಅಳವಂಡಿ ಶಿವಮೂರ್ತಿ ಸ್ವಾಮಿಗಳನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Photo Left to Right: Sri Alavandi Shivamurthy Swamy (sitting), Sri B.V. Kakkilaya and Sri Vishnu Kakkilaya
ಎಡದಿಂದ ಬಲಕ್ಕೆ ಶ್ರೀ ಅಳವಂಡಿ ಶಿವಮೂರ್ತಿ ಸ್ವಾಮಿಗಳು, ಶ್ರೀ ಬಿ ವಿ ಕಕ್ಕಿಲ್ಲಾಯ, ಕಾಸರಗೋಡು ಕರ್ನಾಟಕ ಸಮಿತಿಯ ಅಧ್ಯಕ್ಷರಾದ ಶ್ರೀ ವಿಷ್ಣು ಕಕ್ಕಿಲ್ಲಾಯ

Sri Durgadabailu Shankaragowda, another awardee with Sri B.V. Kakkilaya ಇನ್ನೋರ್ವ ಸನ್ಮಾನಿತರಾದ ಶ್ರೀ ದುರ್ಗದಬೈಲು ಶಂಕರ ಗೌಡರು ಕಕ್ಕಿಲ್ಲಾಯರೊಂದಿಗೆ

ಅದೇ ದಿನ ಬೆಳಗ್ಗೆ ಶ್ರೀ ಬಿ ವಿ ಕಕ್ಕಿಲ್ಲಾಯ ಹಾಗೂ ಇನ್ನಿತರ ಐವರು ಸುರಣ ಕರ್ನಾಟಕ ಏಕೀಕರಣ ಪ್ರಶಸ್ತಿ ವಿಜೇತರನ್ನು ಎಂ ಎಸ್ ಕೃಷ್ಣನ್ ಸ್ಮಾರಕ ಸಂಸ್ಥೆ ಹಾಗೂ ನವಕರ್ನಾಟಕ ಪ್ರಕಾಶನ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.

Photo left to right: Sri Ko. Chennabasappa, Sri H.S. Doreswamy, Sri G. Venkatasubbaiah, Sri Alavandi Shivamurthy Swamy, Sri B.V. Kakkilaya and Sri Vishnu Kakkilaya, President of Karnataka Ekikarana Samithi, Kasaragod.
ಎಡದಿಂದ ಬಲಕ್ಕೆ: ಶ್ರೀ ಕೋ ಚೆನ್ನಬಸಪ್ಪ, ಶ್ರೀ ಎಚ್ ಎಸ್ ದೊರೆಸ್ವಾಮಿ, ಶ್ರೀ ಜಿ ವೆಂಕಟಸುಬ್ಬಯ್ಯ, ಶ್ರೀ ಅಳವಂಡಿ ಶಿವಮೂರ್ತಿ ಸ್ವಾಮಿಗಳು, ಬಿ ವಿ ಕಕ್ಕಿಲ್ಲಾಯ, ವಿಷ್ಣು ಕಕ್ಕಿಲ್ಲಾಯ, ಕಾಸರಗೋಡು

Left to right: Sri Ko. Chennabasappa, Sri H.S. Doreswamy and Sri B.V. Kakkilaya ಎಡದಿಂದ ಬಲಕ್ಕೆ: ಕೋ ಚೆನ್ನಬಸಪ್ಪ, ಎಚ್ ಎಸ್ ದೊರೆಸ್ವಾಮಿ, ಬಿ ವಿ ಕಕ್ಕಿಲ್ಲಾಯ

Speaking on the occasion, Sri Kakkilaya recalled the glorious struggle for unification of Karnataka, against the designs of the erstwhile government and the Kings and rulers of the area. He pleaded that the unity of the state should not be compromised over trivial issues and the language should be the binding spirit for realisation of true democracy.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಿ ವಿ ಕಕ್ಕಿಲ್ಲಾಯರು ಅಂದಿನ ಸರಕಾರ, ಆಳರಸರುಗಳು ಹಾಗೂ ಅಧಿಕಾರಸ್ಥರ ಕಾರ್ಯತಂತ್ರಗಳನ್ನೆಲ್ಲ ವಿರೋಧಿಸಿ ಕರ್ನಾಟಕ ರಾಜ್ಯದ ಏಕೀಕರಣಕ್ಕಾಗಿ ನಡೆಸಲಾದ ಧೀರೋಧಾತ್ತವಾದ ಹೋರಾಟಗಳನ್ನು ಸ್ಮರಿಸಿಕೊಂಡರು ಹಾಗೂ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ರಾಜ್ಯದ ಏಕತೆಯನ್ನು ಭಂಗಗೊಳಿಸುವ ಪ್ರಯತ್ನಗಳನ್ನು ನಡೆಸಕೂಡದೆಂದೂ, ನೈಜ ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸಲು ಭಾಷೆಯೇ ಎಲ್ಲರನ್ನೂ ಒಗ್ಗೂಡಿಸುವ ಸಾಧನವಾಗಬೇಕೆಂದೂ ಕರೆಯಿತ್ತರು.