Category: Articles : ಬರಹಗಳು

ಉತ್ಸವಗಳ ಅಬ್ಬರಕ್ಕಿಂತ ಅವಶ್ಯಕತೆಗಳ ಈಡೇರಿಕೆಗೆ ಸರಕಾರ ಗಮನ ಹರಿಸಲಿ: ಸರಕಾರಿ ಖಜಾನೆ ದೇಶದ ಆಸ್ತಿ, ಖಾಸಗಿ ಸೊತ್ತು ಅಲ್ಲ.

ಧರ್ಮಸ್ಥಳದಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಹಿನ್ನೆಲೆಯಲ್ಲಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ: 28 ಜನವರಿ 2010) ಇಂದು ಕರ್ನಾಟಕದಲ್ಲಿ ದಿನನಿತ್ಯ ಒಂದಲ್ಲ ಒಂದು ಊರಲ್ಲಿ ಒಂದಲ್ಲ ಒಂದು ಹೆಸರಲ್ಲಿ ಜನಮರುಳೋ ಜಾತ್ರೆ ಮರುಳೋ ಎಂಬಂಥ ನಿತ್ಯೋತ್ಸವಗಳು ನಡೆಯುತ್ತಿರುತ್ತವೆ. ಈ ಅಬ್ಬರಗಳು ನಿತ್ಯೋತ್ಸವ ತಾಯೇ ನಿತ್ಯೋತ್ಸವ ಎಂದು ನಿಸ್ಸಾರ್ ಅಹ್ಮ್‌ದ್‌ರವರು ಎದೆ ತುಂಬಿ ಹಾಡಿರುವ ಕನ್ನಡ ನಾಡಿನ ಸಹಜ ನಿತ್ಯೋತ್ಸವಗಳಲ್ಲ. ಈ ನಿತ್ಯೋತ್ಸವಗಳು ಅಧಿಕಾರ ಗಳಿಸಲಿಕ್ಕೆ ಮತ್ತು ತಮ್ಮ ಸ್ಥಾಪಿತ ಹಿತಾಸಕ್ತಿಗಳನ್ನು ಉಳಿಸಿಕೊಳ್ಳುವುದಕ್ಕೆ ಆಳುವವರು ಸರಕಾರಿ ವೆಚ್ಚದಲ್ಲಿ …

Continue reading