Tributes : ನಮನ

Sri BV Kakkilaya was an inspiration to many and with his passing, an era has ended.

ಶ್ರೀ ಬಿ ವಿ ಕಕ್ಕಿಲ್ಲಾಯರಿಂದ ಸ್ಫೂರ್ತಿ ಪಡೆದವರು ಅಸಂಖ್ಯಾತ. ಅವರ ನಿಧನದಿಂದ ನಾಡು ಓರ್ವ ಹಿರಿಯ ಮುತ್ಸದ್ಧಿಯನ್ನೇ ಕಳೆದುಕೊಂಡಂತಾಗಿದೆ.

Following the demise of veteran freedom fighter, leader of Karnataka unification movement, leader of the Communist Party of India and All India Trade Union Congress, architect of the Karnataka Land reforms Act, former member of Rajya Sabha and Karnataka Assembly, award winning writer and thinker, Sri BV Kakkilaya, on June 4, 2012, condolences poured in from across the state and elsewhere. The life and work of Sri BV Kakkilaya inspired many. Political leaders across the spectrum, leaders of Communist parties, trade unions, Kisan movements, writers, thinkers, activists, his comrades, friends and relatives were one in praising his untiring contribution to the country, the state, Kannada literature and his struggle for the deprived and the down trodden.

ಜೂನ್ 4, 2012ರಂದು ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರೂ, ಭಾರತ ಕಮ್ಯೂನಿಸ್ಟ್ ಪಕ್ಷ (ಸಿ.ಪಿ.ಐ) ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಗಳ ಹಿರಿಯ ನಾಯಕರೂ, ರಾಜ್ಯ ಸಭೆ ಹಾಗೂ ಕರ್ನಾಟಕ ವಿಧಾನ ಸಭೆಗಳ ಮಾಜಿ ಸದಸ್ಯರೂ, ಕರ್ನಾಟಕ ಭೂಸುಧಾರಣಾ ಮಸೂದೆಯ ರೂವಾರಿಗಳೂ, ಪ್ರಶಸ್ತಿ ವಿಜೇತ ಲೇಖಕರೂ, ಚಿಂತಕರೂ ಆಗಿದ್ದ ಶ್ರೀ ಬಿ.ವಿ. ಕಕ್ಕಿಲ್ಲಾಯರಿಗೆ ನಾಡಿನ ಉದ್ದಗಲಗಳಿಂದಲೂ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಶ್ರೀ ಬಿ ವಿ ಕಕ್ಕಿಲ್ಲಾಯರ ಜೀವನ ಮತ್ತು ಕಾರ್ಯಗಳಿಂದ ಪ್ರೇರೇಪಿತರಾದವರಿಗೆ ಲೆಕ್ಕವಿಲ್ಲ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಮ್ಯೂನಿಸ್ಟ್ ಪಕ್ಷಗಳ ನಾಯಕರು, ರೈತ-ಕಾರ್ಮಿಕ ಚಳುವಳಿಗಳ ನೇತಾರರು, ಬರಹಗಾರರು, ಚಿಂತಕರು, ಅವರ ನಿಕಟ ಸಂಗಾತಿಗಳು, ಮಿತ್ರರು ಮತ್ತು ಬಂಧುಗಳು ಎಲ್ಲರೊಂದಾಗಿ ನಮ್ಮ ದೇಶ, ರಾಜ್ಯ, ಕನ್ನಡ ಸಾಹಿತ್ಯಗಳಿಗೆ ಕಕ್ಕಿಲ್ಲಾಯರು ಸಲ್ಲಿಸಿದ ಸೇವೆಯನ್ನು ಹಾಗೂ ಶೋಷಿತ ವರ್ಗಗಳ ಹಕ್ಕುಗಳಿಗಾಗಿ ಅವರು ಮುನ್ನಡೆಸಿದ ಹೋರಾಟಗಳನ್ನು ಕೊಂಡಾಡಿದರು.

Rajyasabha Obituary on 22 Nov, 2012 [See 1, 2]

ಜೂನ್ 16, ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಕಕ್ಕಿಲ್ಲಾಯ ಸ್ಮರಣ ಸಭೆಯನ್ನು ಆಯೋಜಿಸಲಾಗಿತ್ತು.  ಭಾರತ  ಕಮ್ಯೂನಿಸ್ಟ್ ಪಕ್ಷದ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕಾಂ. ಸುಧಾಕರ ರೆಡ್ಡಿ, ಚಿಂತಕ ಡಾ. ಜಿ. ರಾಮಕೃಷ್ಣ, ನಿವೃತ್ತ ನ್ಯಾಯಾಧೀಶರಾದ ಕೋ. ಚೆನ್ನಬಸಪ್ಪ, ಮಾಜಿ ಸಚಿವ ಬಿ ಎ ಮೊಹಿದ್ದೀನ್, ಸಿಪಿಎಂ ನಾಯಕರಾದ ಜಿ ಎನ್ ನಾಗರಾಜ್, ನವಕರ್ನಾಟಕದ ವ್ಯವಸ್ಥಾಪಕ ನಿರ್ದೇಶಕರಾದ ಆರ್ ಎಸ್ ರಾಜಾರಾಂ, ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರುಗಳು ಕಕ್ಕಿಲ್ಲಾಯರು ಮತ್ತವರ ಜೀವನ-ಸಾಧನೆಗಳ ಬಗೆ ಮಾತನಾಡಿ ನುಡಿನಮನಗಳನ್ನು ಸಲ್ಲಿಸಿದರು.  ಭಾರತ  ಕಮ್ಯೂನಿಸ್ಟ್ ಪಕ್ಷದ  ರಾಜ್ಯ ಮಂಡಲಿಯ ಪ್ರಧಾನ ಕಾರ್ಯದರ್ಶಃಇಗಳಾದ ಪಿ ವಿ ಲೋಕೇಶ್ ಅವರು ಅಧ್ಯಕ್ಷತೆ ವಹಿಸಿದ್ದರು.

ವರದಿಗಳು: ಪ್ರಜಾವಾಣಿ | The Hindu | ಪ್ರಜಾವಾಣಿವಾರ್ತಾಭಾರತಿ 1 | ವಾರ್ತಾಭಾರತಿ 2 | ಕೆಂಬಾವುಟ 1, 2

ಬಿ ವಿ ಕಕ್ಕಿಲ್ಲಾಯರ ಸ್ಫೂರ್ತಿಯಿಂದ ಶಾಲಾ ಮಕ್ಕಳಿಗೆ ಚೀಲ | Inspired by BV Kakkilaya, school bags for kids [Deccan Herald | Times of Inida | The HinduMangalorean.com | Mangalore Today

  • ಜೂನ್ 9 ರ ಉದಯವಾಣಿಯಲ್ಲಿ ನಾರಾಯಣ ಎ ಬರೆದ ಅಂಕಣ ಕಾಲಕಾರಣ: ಬರೆಯದ ದಿನಚರಿಯ ಕೊನೆಯ ಪುಟ ಮುಗಿಸಿದ ಬಿ.ವಿ. ಕಕ್ಕಿಲ್ಲಾಯ: ಎಲ್ಲ ತತ್ವದೆಲ್ಲೆ ಮೀರಿದ ರಾಜಕಾರಣಿ [ನೋಡಿ]
  • ತೀರದ ಕಕ್ಕುಲತೆಯ ಕಣಜ ಕಕ್ಕಿಲ್ಲಾಯ! ಹಲೀಮತ್ ಸಾದಿಯಾ, ಕನ್ನಡಪ್ರಭ, ಜೂನ್ 10, 2012 [ನೋಡಿ ಪುಟ 16 | ನೋಡಿ]
  • ಕಳಚಿದ ಕೆಂಪುನಕ್ಷತ್ರ ಬಿ.ವಿ.ಕಕ್ಕಿಲ್ಲಾಯ – ಬಾಲಕೃಷ್ಣ ಪುತ್ತಿಗೆ ಪ್ರಜಾವಾಣಿ ಜೂನ್ 10, 2012 [ನೋಡಿ]
  • ಸಮತಾ ಸಮಾಜದ ಕನಸುಗಾರ – ವಾರ್ತಾಭಾರತಿ ಜೂನ್ 10, 2012 [ನೋಡಿ]
  • ಜನನಾಯಕನೊಬ್ಬನ ನಿರ್ಗಮನ – ಸನತ್ ಕುಮಾರ್ ಬೆಳಗಲಿ – ವಾರ್ತಾಭಾರತಿ ಜೂನ್ 11, 2012 [ನೋಡಿ]
  • ಅಗಲಿದ ಕಾಮ್ರೆಡ್‌ಗೆ ವಿದಾಯ-ಒಂದು ವಾಗ್ವಾದದೊಂದಿಗೆ : ಜಿ ರಾಜಶೇಖರ್ – ವಾರ್ತಾಭಾರತಿ ಮಂಗಳವಾರ – ಜೂನ್ -19-2012 [ನೋಡಿ]
  • ಲೋಕ ತಿಳಿವಳಿಕೆಯ ವಿಸ್ಮೃತಿಯಲ್ಲಿ ಕಮ್ಯುನಿಸ್ಟರು: ಡಾ. ಫಣಿರಾಜ್, ಪ್ರಜಾವಾಣಿ ಸಾಪ್ತಾಹಿಕ ಪುರವಣಿ ಜೂನ್ 24, 2012 [ನೋಡಿ]
  • ಕರಾವಳಿಯ ಕೆಂಪು ಸೂರ್ಯ ಅಸ್ತಂಗತ – ಮರೆಯಲಾರದ ನಡೆದಾಡಿದ ನೆನಪು: ರಮೇಶ್ ಕೆಳಗೂರು / ಇಬ್ಬರು ಹಿರಿಯ ಮುಖಂಡರ ನಮನ [ಕೆಂಬಾವುಟ ಜುಲೈ 8, 2012]
  • ಬಿ ವಿ ಕಕ್ಕಿಲ್ಲಾಯರ ನೆನಪು : ಸಂಪದದಲ್ಲಿ ಅಡ್ಡೂರು ಶಿವಶಂಕರ ರಾವ್ ಲೇಖನ – ಜುಲೈ 15, 2012

ಪತ್ರಿಕಾ ವರದಿಗಳು: