Archives

Sri B.V. Kakkilaya Honoured with Karl Marx Award :: Oct 2, 2010 ಬಿ.ವಿ. ಕಕ್ಕಿಲ್ಲಾಯರಿಗೆ ಕಾರ್ಲ್ ಮಾರ್ಕ್ಸ್ ಪ್ರಶಸ್ತಿ ಪ್ರದಾನ, ಅಕ್ಟೋಬರ್ 2, 2010

Freedom fighter and veteran leader of the Communist Party of India, Sri B.V. Kakkilaya, was honoured with the Karl Marx Award for his immense contribution to the Communist movement in the country by the Indian Institute of Marxist Theory and Practice, Dharwad. The award included a citation, a plaque, Rs. 10000 in cash, books, a shawl and a peta. Sri Kakkilaya returned Rs 10000 to the Institute for continuing their good work. The cordial function was held at Sri Kakkilaya’s residence on Oct 2, 2010 and was attended by Sri K.S. Sharma and Dr. Raghavendra Rao of the Institute, Sri Subbayya Shetty, former minister, Sri PV Lokesh, Joint Secretary of Karnataka State Council of CPI and other leaders and members of the party and well wishers.

ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ಶ್ರೀ ಬಿ.ವಿ. ಕಕ್ಕಿಲ್ಲಾಯರು ಕಮ್ಯೂನಿಸ್ಟ್ ಚಳುವಳಿಗೆ ನೀಡಿದ ಅಪ್ರತಿಮ ಕೊಡುಗೆಗಾಗಿ ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಕ್ಸಿಟ್ ಥಿಯರಿ ಮತ್ತು ಪ್ರಾಕ್ಟೀಸ್ ಸಂಸ್ಥೆಯ ವತಿಯಿಂದ ಕಾರ್ಲ್ ಮಾರ್ಕ್ಸ್ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಲಾಯಿತು. ಪ್ರಶಸ್ತಿ ಪತ್ರ, ಸ್ಮರಣಿಕೆ, ಹತ್ತು ಸಾವಿರ ರೂಪಾಯಿ, ಶಾಲು, ಪೇಟ ಹಾಗೂ ಹಲವು ಪುಸ್ತಕಗಳನ್ನು ಶ್ರೀ ಕಕ್ಕಿಲ್ಲಾಯರಿಗೆ ನೀಡಿ ಗೌರವಿಸಲಾಯಿತು. ಶ್ರೀ ಕಕ್ಕಿಲ್ಲಾಯರು ತಮಗೆ ನೀಡಲಾದ ಹತ್ತು ಸಾವಿರ ರೂಪಾಯಿಗಳನ್ನು ಸಂಸ್ಥೆಯ ಕಾರ್ಯಕ್ರಮಗಳಿಗಾಗಿ ಮರಳಿ ನೀಡಿದರು. ಶ್ರೀ ಕಕ್ಕಿಲ್ಲಾಯರ ನಿವಾಸದಲ್ಲಿ ಆಯೋಜಿಸಲಾಗಿದ್ದ ಈ ಆತ್ಮೀಯ ಸಮಾರಂಭದಲ್ಲಿ ಸಂಸ್ಥೆಯ ಹಿರಿಯರಾದ ಶ್ರೀ ಕೆ.ಎಸ್. ಶರ್ಮಾ, ಡಾ. ರಾಘವೇಂದ್ರ ರಾವ್, ಮಾಜಿ ಸಚಿವರಾದ ಶ್ರೀ ಸುಬ್ಬಯ್ಯ ಶೆಟ್ಟಿ, ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಮಂಡಲಿಯ ಜೊತೆ ಕಾರ್ಯದರ್ಶಿ ಶ್ರೀ ಪಿ.ವಿ. ಲೋಕೇಶ್ ಹಾಗೂ ಜಿಲ್ಲೆಯ ಪಕ್ಷದ ನಾಯಕರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.

Sri PV Lokesh, Sri KS Sharma, Sri B.V. Kakkilaya, Sri Subbayya Shetty and Dr Raghavendra Rao on the occasion

ಶ್ರೀಗಳಾದ ಪಿ ವಿ ಲೋಕೇಶ್, ಕೆ ಎಸ್ ಶರ್ಮಾ, ಬಿ ವಿ ಕಕ್ಕಿಲ್ಲಾಯ, ಸುಬ್ಬಯ್ಯ ಶೆಟ್ಟಿ ಹಾಗೂ ರಾಘವೇಂದ್ರ ರಾವ್

Sri KS Sharma presenting Sri Kakkilaya with books

ಶ್ರೀ ಕೆ ಎಸ್ ಶರ್ಮಾ ಅವರಿಂದ ಬಿ ವಿ ಕಕ್ಕಿಲ್ಲಾಯರಿಗೆ ಪುಸ್ತಕಗಳ ಕೊಡುಗೆ

Sri BV Kakkilaya with the shawl, peta and citation

ಶಾಲು, ಪೇಟ ಹಾಗೂ ಮಾನಪತ್ರಗಳ ಜೊತೆ ಬಿ ವಿ ಕಕ್ಕಿಲ್ಲಾಯ

BV Kakkilaya speaks on the occasion

ಬಿ ವಿ ಕಕ್ಕಿಲ್ಲಾಯರ ಪ್ರತಿಕ್ರಿಯೆ

ವಾರ್ತಾಭಾರತಿ

Felicitation to Sri B.V. Kakkilaya : March 22, 2009, Bangalore :: ಬಿ ವಿ ಕಕ್ಕಿಲ್ಲಾಯರಿಗೆ ಸನ್ಮಾನ : ಬೆಂಗಳೂರು, ಮಾರ್ಚ್ 22, 2009

Nonagenarian Sri B.V. Kakkilaya, well known as a leader of the Communist Party of India (CPI), a freedom fighter, a leader of the Karnataka unification movement, an award winning writer, a leader of the working class, a member of the Rajya Sabha and Karnataka State Assembly and as an orator was felicitated in a simple function at Bangalore on March 22, 2009. It was organised by the M.S. Krishnan Memorial Trust, Bangalore at the Senate Hall, Central College, Bangalore. A felicitation volume, titled Nirantara, comprising of articles about his life and work written by his close associates, lectures delivered at the ‘Kakkilaya 90: Dialogue with the new generation’ held in May last, lectures and articles written by Sri Kakkilaya etc., was presented to him on the occasion by veteran leader Sri M.C. Narasimhan. Sri BA Moidin, Subbayya Shetty and Dr. G. Ramakrishna spoke about the life and work of Sri Kakkilaya, Dr. Siddanagowda Patil, Secretary of Karnataka State CPI, was present. The programme was presided by Sri Ko. Chennabasappa.

ಹಿರಿಯ ಕಮ್ಯೂನಿಸ್ಟ್ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾಗಿ, ಪ್ರಶಸ್ತಿ ವಿಜೇತ ಚಿಂತನಶೀಲ ಬರಹಗಾರರಾಗಿ, ರೈತ-ಕಾರ್ಮಿಕರ ನಾಯಕರಾಗಿ, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಸದಸ್ಯರಾಗಿ ಹಾಗೂ ಅತ್ಯುತ್ತಮ ಭಾಷಣಕಾರರಾಗಿ ನಾಡಿನಾದ್ಯಂತ ಚಿರಪರಿಚಿತರಾಗಿರುವ ಶ್ರೀ ಬಿ.ವಿ. ಕಕ್ಕಿಲ್ಲಾಯರು ತೊಂಭತ್ತರ ಹರೆಯವನ್ನು ದಾಟಿದ ಸಂದರ್ಭದಲ್ಲಿ ಈ ಜ್ಞಾನವೃದ್ಧರಿಗೆ ಒಂದು ಸರಳವಾದ ಅಭಿನಂದನಾ ಸಮಾರಂಭವನ್ನು ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆಯ ಆಶ್ರಯದಲ್ಲಿ ಮಾರ್ಚ್ 22, ರವಿವಾರದಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕಕ್ಕಿಲ್ಲಾಯರ ಜೀವನ ಮತ್ತು ಹೋರಾಟಗಳ ಬಗ್ಗೆ ಅವರ ಆಪ್ತರು ಬರೆದಿರುವ ಲೇಖನಗಳು, ಕಳೆದ ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ‘ಕಕ್ಕಿಲ್ಲಾಯ – 90: ಹೊಸ ಪೀಳಿಗೆಯೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಮಾಡಲಾದ ಭಾಷಣಗಳು, ಕಕ್ಕಿಲ್ಲಾಯರ ಕೆಲವು ಭಾಷಣಗಳು ಮತ್ತು ಪ್ರಮುಖ ಲೇಖನಗಳನ್ನೊಳಗೊಂಡ ‘ನಿರಂತರ’ ಎಂಬ ಅಭಿನಂದನಾ ಗ್ರಂಥವನ್ನು ಅವರ ಸಂಗಾತಿ, ಹಿರಿಯ ಕಾರ್ಮಿಕ ನಾಯಕರಾದ ಎಂ.ಸಿ. ನರಸಿಂಹನ್ ಅವರು ಕಕ್ಕಿಲ್ಲಾಯರಿಗೆ ನೀಡಿ ಗೌರವಿಸಿದರು. ಶ್ರೀಯುತರಾದ ಬಿ.ಎ. ಮೊಹಿದೀನ್, ಬಿ. ಸುಬ್ಬಯ್ಯ ಶೆಟ್ಟಿ ಹಾಗೂ ಡಾ| ಜಿ. ರಾಮಕೃಷ್ಣ ಅವರು ಕಕ್ಕಿಲ್ಲಾಯರ ಜೀವನ-ಸಾಧನೆಗಳ ಬಗ್ಗೆ ಮಾತಾಡಿದರು. ಡಾ| ಸಿದ್ಧನಗೌಡ ಪಾಟೀಲ್ ಮತ್ತಿತರ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೋ. ಚೆನ್ನಬಸಪ್ಪನವರು ವಹಿಸಿದ್ದರು. ಶ್ರೀ ಕಕ್ಕಿಲ್ಲಾಯರ ಸಂಗಾತಿಗಳು, ಬಂಧುಗಳು, ಮಿತ್ರರು ಹಾಗೂ ಅಭಿಮಾನಿಗಳಿಂದ ತುಂಬಿದ್ದ ಸಭಾಂಗಣದಲ್ಲಿ ಹಳೆಯ ದಿನಗಳ ಹೋರಾಟಗಳ ನೆನಪುಗಳು ಬಿಚ್ಚುತ್ತಿದ್ದಂತೆ ಇಂದಿನ ಸಮಸ್ಯೆಗಳನ್ನು ಎದುರಿಸಲು ಮತ್ತೊಮ್ಮೆ ಸಮರಶೀಲರಾಗಿ ದುಡಿಯಬೇಕಾದ ಅಗತ್ಯವು ನೆರೆದಿದ್ದವರಿಗೆಲ್ಲಾ ಮನಗಂಡಿರಬೇಕು.

A book on Bhagath Singh, translated by Haleemath Sadiah (left), released by B.V. Kakkilaya on the occasion

ಹಲೀಮತ್ ಸ ಅದಿಯ (ಎಡಗಡೆ) ಅನುವಾದಿಸಿದ ಭಗತ್ ಸಿಂಗ್ ಬಗೆಗಿನ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವ ಬಿ ವಿ ಕಕ್ಕಿಲ್ಲಾಯ [ನೋಡಿ: ಹಲೀಮತ್ ಬರಹ]

‘Nirantara’ presented to B.V. Kakkilaya by Sri MC Narasimhan (L to R: Sri K.S. Parthasarathy, B.A. Mohidin, Ko. Chennabasappa, BV Kakkilaya, Subbayya Shetty, MC Narasimhan

‘ನಿರಂತರ’ ಸಂಭಾವನಾ ಗ್ರಂಥವನ್ನು ಬಿ ವಿ ಕಕ್ಕಿಲ್ಲಾಯರಿಗೆ ಅರ್ಪಿಸುತ್ತಿರುವ ಶ್ರೀಗಳಾದ (ಎಡದಿಂದ) ಕೆ ಎಸ್ ಪಾರ್ಥಸಾರಥಿ, ಬಿ ಎ ಮೊಹಿದಿನ್, ಕೋ ಚೆನ್ನಬಸಪ್ಪ, ಸುಬ್ಬಯ್ಯ ಶೆಟ್ಟಿ ಹಾಗೂ ಎಂಸಿ ನರಸಿಂಹನ್

Source: The Hindu, Mar 23, 3009 :: ಕೃಪೆ: ದಿ ಹಿಂದೂ

A bust of Karl Marx presented to BV Kakkilaya

ಬಿ ವಿ ಕಕ್ಕಿಲ್ಲಾಯರಿಗೆ ಕಾರ್ಲ್ ಮಾರ್ಕ್ಸ್ ಪ್ರತಿಮೆ ಪ್ರದಾನ

BV Kakkilaya speaks on the occasion

ಬಿ ವಿ ಕಕ್ಕಿಲ್ಲಾಯರ ಪ್ರತಿಕ್ರಿಯೆ

ವರದಿಗಳು :: Reports

Kakkilaya – 90: Dialogue with the New Generation :: ಕಕ್ಕಿಲ್ಲಾಯ – 90: ಹೊಸ ಪೀಳಿಗೆಯೊಂದಿಗೆ ಸಂವಾದ

Kakkilaya – 90: Dialogue with the New Generation
May 30-June 1, 2008
Organsied by: M.S. Krishnan Memorial Trust, Bangalore; Hosathu Monthly, Bangalore, Samdarshi Vedike, Mangalore
Venue: Karnataka Bank Employees’ Auditorium, Bejai-Kapikad, Mangalore 575004

ಕಕ್ಕಿಲ್ಲಾಯ – 90: ಹೊಸ ಪೀಳಿಗೆಯೊಂದಿಗೆ ಸಂವಾದ
ಮೇ 30-ಜೂನ್ 1, 2008
ಸ್ಥಳ: ಕರ್ನಾಟಕ ಬ್ಯಾಂಕ್ ನೌಕರರ ಸಂಘದ ಸಭಾಭವನ, ಬಿಜೈ-ಕಾಪಿಕಾಡ್ ರಸ್ತೆ, ಮಂಗಳೂರು
ಆಯೋಜನೆ: ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ, ಬೆಂಗಳೂರು; ‘ಹೊಸತು’ ಮಾಸ ಪತ್ರಿಕೆ, ಬೆಂಗಳೂರು; ಸಮದರ್ಶಿ ವೇದಿಕೆ, ಮಂಗಳೂರು

On the occasion of Sri B.V. Kakkilaya turning 90 years, a unique felicitation programme titled ‘Kakkilaya 90: Dialogue with the New Generation’ was organised from May 30-June 1, 2008 at Mangalore. As a tribute to his 70 years of struggle with the masses and his services as a freedom fighter, leader of the Communist Party of India, leader of the Karnataka Unification Movement, Member of Rajya Sabha and Karnataka Legislative Assembly etc., the programme included lectures and discussions on various topics such as India’s strugghle for freedom, communalism, Kannada literature and emancipation of women. Renowned thinkers, writers, historians, and leaders of the Communist Party were the resource persons for the thought provoking lectures and discussions thereafter. Sri Kakkilaya participated in all the deliberations very enthusiastically. Get togethers of family members and comrades of Sri Kakkilaya were also held on May 30th.

ನಮ್ಮ ನಾಡಿನ ಹಿರಿಯ ಮುತ್ಸದ್ಧಿ ಶ್ರೀ ಬಿ.ವಿ. ಕಕ್ಕಿಲ್ಲಾಯರು ತೊಂಭತ್ತರ ಹರೆಯಕ್ಕೆ ಕಾಲಿಟ್ಟ ಸಂದರ್ಭದಲ್ಲಿ, 2008ರ ಮೇ 30 ಮತ್ತು ಜೂನ್ 1ರಂದು, ಅವರ ಅಭಿಮಾನಿಗಳು ಮತ್ತು ನೆಂಟರಿಷ್ಟರೆಲ್ಲರೂ ಸೇರಿ ವಿನೂತನವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯ ರೂವಾರಿಗಳಲ್ಲೊಬ್ಬರಾಗಿ, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಸದಸ್ಯರಾಗಿ ಕಳೆದ 70 ವರ್ಷಗಳಲ್ಲಿ ಶ್ರೀ ಬಿ.ವಿ. ಕಕ್ಕಿಲ್ಲಾಯರ ಸೇವೆಯನ್ನು ಮತ್ತು ಜನಪರ ಹೋರಾಟಗಳನ್ನು ನೆನಪಿಸಿಕೊಳ್ಳುತ್ತ, ಕರ್ನಾಟಕದ ಮತ್ತು ರಾಷ್ಟ್ರದ ಪ್ರಸಕ್ತ ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶದಲ್ಲಿ ಇಂದಿನ ಜನಾಂಗದ ಮುಂದಿರುವ ಸವಾಲುಗಳ ಬಗೆಗೆ ಇಂದಿನ ಪೀಳಿಗೆಯೊಂದಿಗೆ ಸಂವಾದವೆನ್ನುವಂತೆ ಈ ಕಾರ್ಯಕ್ರಮವನ್ನು ರೂಪಿಸಲಾಗಿತ್ತು .ಬೆಂಗಳೂರಿನ ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ, ‘ಹೊಸತು’ ಮಾಸ ಪತ್ರಿಕೆ, ಹಾಗೂ ಮಂಗಳೂರಿನ ಸಮದರ್ಶಿ ವೇದಿಕ ಮತ್ತು ಕಕ್ಕಿಲ್ಲಾಯರ ಕುಟುಂಬಸ್ಥರು ಜೊತೆಯಾಗಿ ಆಯೋಜಿಸಿದ್ದ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ದೇಶದ ಖ್ಯಾತ ಚಿಂತಕರು, ಬರಹಗಾರರು, ಇತಿಹಾಸಜ್ಞರು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಎರಡು ದಿನಗಳಲ್ಲೂ ವಿಚಾರಪ್ರದವಾದ ಭಾಷಣಗಳೂ, ಚರ್ಚೆಗಳೂ ನಡೆದವು, ಶ್ರೀ ಕಕ್ಕಿಲ್ಲಾಯರೂ ಅತ್ಯುತ್ಸಾಹದಿಂದ ಅವುಗಳಲ್ಲಿ ಭಾಗಿಯಾಗಿದ್ದರು. ಮುನ್ನಾದಿನ, ಮೇ 30ರಂದು, ಕಕ್ಕಿಲ್ಲಾಯರ ಕುಟುಂಬಸ್ಥರು ಹಾಗೂ ಅವರೊಂದಿಗೆ ದುಡಿದ ಸಂಗಾತಿಗಳ ಪುನರ್ಮಿಲನಗಳನ್ನೂ ಏರ್ಪಡಿಸಲಾಗಿತ್ತು.

Sri PMN Moorthy reminisces (above) and Sri Addoor Shivashankar Rao reminisces (below)

ನೆನಪಿನಾಳದಿಂದ ಮಾತು ಬಿಚ್ಚಿಟ್ಟ ಶ್ರೀ ಪಿ ಎಂ ನಾರಾಯಣ ಮೂರ್ತಿ ಹಾಗೂ ಶ್ರೀ ಎ ಶಿವಶಂಕರ ರಾವ್ (ಕೆಳಗೆ)

Sri BV Kakkilaya felicitated by Sri MC Narasimhan and Sri Siddanagowda Patil

ಶ್ರೀ ಎಂ ಸಿ ನರಸಿಂಹನ್ ಹಾಗೂ ಶ್ರೀ ಸಿದ್ದನಗೌಡ ಪಾಟೀಲರಿಂದ ಬಿ ವಿ ಕಕ್ಕಿಲ್ಲಾಯರಿಗೆ ಅಭಿನಂದನೆ

Sri MC Narasimhan speaks

ಶ್ರೀ ಎಂ ಸಿ ನರಸಿಂಹನ್ ಭಾಷಣ

Invitees ಆಹ್ವಾನಿತ ಸಂಗಾತಿಗಳು

Dr. G. Ramakrishna speaks

ಡಾ. ಜಿ ರಾಮಕೃಷ್ಣ ಭಾಷಣ

Sri BV Kakkilaya responds

ಶ್ರೀ ಬಿ ವಿ ಕಕ್ಕಿಲ್ಲಾಯರ ಪ್ರತಿಕ್ರಿಯೆ

Cultural Programme by IPTA, DK Unit

ಇಪ್ಟಾ ದಕ ಜಿಲ್ಲಾ ಘಟಕದ ಸದಸ್ಯರಿಂದ ಕ್ರಾಂತಿಗೀತೆಗಳು

Sri KS Parthasarathy welcomes

ಶ್ರೀ ಕೆ ಎಸ್ ಪಾರ್ಥಸಾರಥಿ ಅವರಿಂದ ಸ್ವಾಗತ

Dr. Sumitra Devi speaks on ‘Issues of Liberation in Kannada Literature’

ಡಾ. ಸುಮಿತ್ರಾ ದೇವಿ ಭಾಷಣ: ಆಧುನಿಕ ಕನ್ನಡ ಸಾಹಿತ್ಯ ವಿಮೋಚನೆಯ ಪ್ರಶ್ನೆಗಳನ್ನು ನಿರ್ವಹಿಸಿದ ಬಗೆ

Dr. Rehamat Tarikere speaks on ‘Concepts of Nation and State in Kannada Literature’

ಡಾ. ರಹಮತ್ ತರೀಕೆರೆ ಭಾಷಣ: ನ್ನಡ ಸಾಹಿತ್ಯದಲ್ಲಿ ರಾಷ್ಟ್ರ ಹಾಗೂ ರಾಜ್ಯದ ಸಂರಚನೆಗಳು

Sri BV Kakkilaya with Sri Subbayya Shetty and Sri BA Moideen, former ministers of Karnataka

ಬಿ ವಿ ಕಕ್ಕಿಲ್ಲಾಯರೊಂದಿಗೆ ಅವರ ಆಪ್ತರಾದ, ಮಾಜಿ ಸಚಿವರಾದ, ಶ್ರೀ ಸುಬ್ಬಯ್ಯ ಶೆಟ್ಟಿ ಹಾಗೂ ಶ್ರೀ ಬಿ ಎ ಮೊಹಿದಿನ್

Sri BV Kakkilaya with his comrades, Sri Sanjeeva Shetty (middle) and Sri Vishwanath Naik

ಸಂಗಾತಿಗಳಾದ ಶ್ರೀ ಸಂಜೀವ ಶೆಟ್ಟಿ (ಮಧ್ಯ) ಹಾಗೂ ಶ್ರೀ ವಿಶ್ವನಾಥ ನಾಯಕ್ ಅವರೊಂದಿಗೆ ಬಿ ವಿ ಕಕ್ಕಿಲ್ಲಾಯರು

Dr. Sabeeha Bhoomigowda speaks on ‘Expressions of Gender and Caste Discrimination in Kannada Literature’

ಡಾ. ಸಬೀಹಾ ಭೂಮಿಗೌಡ ಭಾಷಣ: ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜಾತಿ ಮತ್ತು ಲಿಂಗ ತಾರತಮ್ಯಗಳ ನಿರೂಪಣೆ

Dr. Lingadevaru Halemane speaks on ‘Kannada Literature and Struggles in Karnataka’

ಡಾ. ಲಿಂಗದೇವರು ಹಳೇಮನೆ ಭಾಷಣ: ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಚಳುವಳಿಗಳು

Section of the audience

ಭಾಗವಹಿಸಿದ ಆಸಕ್ತರು

Sri BV Kakkilaya interjects

ಶ್ರೀ ಬಿ ವಿ ಕಕ್ಕಿಲ್ಲಾಯರಿಂದ ಮಧ್ಯ ಪ್ರವೇಶ

Dr. Siddanagowda Patil speaks

ಡಾ. ಸಿದ್ಧನಗೌಡ ಪಾಟೀಲ್ ಭಾಷಣ

Dr. Rajashekhar speaks

ಡಾ. ರಾಜಶೇಖರ್ ಅಧ್ಯಕ್ಷೀಯ ಭಾಷಣ

Dr. Surendra Rao speaks on ‘Whatever happened to our Freedom Struggle?’

ಡಾ ಸುರೇಂದ್ರ ರಾವ್ ಭಾಷಣ: ‘ನಮ್ಮ ಸ್ವಾತಂತ್ರ್ಯ ಚಳುವಳಿಗೇನಾಗಿದೆ?’

Sri CK Chandrappan speaks on ‘Ideals of Freedom Struggle and Post Independence Experience’

ಶ್ರೀ ಸಿ ಕೆ ಚಂದ್ರಪ್ಪನ್ ಭಾಷಣ: ‘ಸ್ವಾತಂತ್ರ್ಯ ಚಳುವಳಿಯ ಆದರ್ಶಗಳು ಮತ್ತು ಸ್ವಾತಂತ್ರ್ಯೋತ್ತರ ಅನುಭವಗಳು’

Sri BV Kakkilaya with his comrade K. Madhavan

ಸಂಗಾತಿ ಕೆ ಮಾಧವನ್ ಜೊತೆ ಬಿ ವಿ ಕಕ್ಕಿಲ್ಲಾಯ

Dr. Kamal Chenoy speaks on ‘From NAM Leadership to Alliance with Imperialism’

ಡಾ. ಕಮಲ್ ಚಿನಾಯ್ ಭಾಷಣ: ‘ಅಲಿಪ್ತ ನಾಯಕತ್ವದಿಂದ ಸಾಮ್ರಾಜ್ಯಶಾಹಿ ಸಖ್ಯದೆಡೆಗೆ’

Dr. Muzzaffar Assadi speaks on ‘Future of Constitutional Guarantees’

ಡಾ. ಮುಜಫರ್ ಅಸ್ಸದಿ ಭಾಷಣ: ಸಾಂವಿಧಾನಿಕ ಭರವಸೆಗಳ ಭವಿಷ್ಯ’

 Sri BV Kakkilaya interjects

ಶ್ರೀ ಬಿ ವಿ ಕಕ್ಕಿಲ್ಲಾಯರಿಂದ ಮಧ್ಯ ಪ್ರವೇಶ

Sri Praful Bidwai interjects

ಶ್ರೀ ಪ್ರಫುಲ್ ಬಿದ್ವಾಯಿ ಅವರಿಂದ ಮಧ್ಯ ಪ್ರವೇಶ

Dr. GV Joshi speaks on ‘Indian Economic Growth: Exclusive-Inclusive Logjam’

ಡಾ ಜಿ ವಿ ಜೋಷಿ ಭಾಷಣ: ಭಾರತದ ಆರ್ಥಿಕ ಅಭಿವೃದ್ಧಿ: ರಹಿತ-ಸಹಿತರ ಕಗ್ಗಂಟು’

Dr. Sanjay Biswas interjects

ಡಾ ಸಂಜಯ್ ಬಿಸ್ವಾಸ್ ಅವರಿಂದ ಮಧ್ಯ ಪ್ರವೇಶ

Section of the audience

ಆಸಕ್ತ ಪ್ರತಿನಿಧಿಗಳು

Cultural Programme presented by Aayana, Mangalore

ಮಂಗಳೂರಿನ ಆಯನ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ

Sri Praful Bidwai speaks on ‘Economic and Political Roots of Communalism’

ಶ್ರೀ ಪ್ರಫುಲ್ ಬಿದ್ವಾಯಿ ಭಾಷಣ: ‘ಕೋಮುವಾದದ ಆರ್ಥಿಕ ಹಾಗೂ ರಾಜಕೀಯ ಬೇರುಗಳು’

Sri Shameem Fyzee speaks on ‘State, Civil society and Politics of communalism in India’

ಶ್ರೀ ಶಮೀಮ್ ಫೈಜಿ ಭಾಷಣ: ‘ರಾಜ್ಯ, ಸಮಾಜ ಮತ್ತು ಭಾರತದಲ್ಲಿ ಕೋಮುವಾದದ ರಾಜಕೀಯ’

Dr. Phaniraj speaks on Anatomy of Communal Violence in Karnataka

ಡಾ ಫಣಿರಾಜ್ ಭಾಷಣ: ‘ಕರ್ನಾಟಕದಲ್ಲಿ ಕೋಮುವಾದದ ಸ್ವರೂಪ’

Smt. Sara Aboobakar’s presidential remarks on Combating Communalism and Terrorism

ಶ್ರೀಮತಿ ಸಾರಾ ಅಬೂಬಕರ್ ಅಧ್ಯಕ್ಷೀಯ ಭಾಷಣ: ‘ಕೋಮುವಾದ ಮತ್ತು ಭಯೋತ್ಪಾದನೆಯನ್ನು ಎದುರಿಸುವ ಬಗೆ’

Sri BV Kakkilaya felicitated by Sri MC Narasimhan and Sri Shammem Fyzee on behalf of CPI, Davanagere

ಭಾರತ ಕಮ್ಯೂನಿಸ್ಟ್ ಪಕ್ಷದ ದಾವಣಗೆರೆ ಘಟಕದ ಪರವಾಗಿ ಶ್ರೀ ಎಂಸಿ ನರಸಿಂಹನ್ ಹಾಗೂ ಶ್ರೀ ಶಮೀಮ್ ಫೈಜಿ ಅವರಿಂದ ಕಕ್ಕಿಲ್ಲಾಯರಿಗೆ ಅಭಿನಂದನೆ

Sri BV Kakkilaya responds

ಶ್ರೀ ಬಿ ವಿ ಕಕ್ಕಿಲ್ಲಾಯರ ಪ್ರತಿಕ್ರಿಯೆ

Dr. N. Gayathri speaks

ಡಾ ಎನ್ ಗಾಯತ್ರಿ ಭಾಷಣ

Dr. TR Chandrashekhara speaks on Governmental Plans and Programmes for Women

ಡಾ ಟಿ ಆರ್ ಚಂದ್ರಶೇಖರ್ ಭಾಷಣ: ಮಹಿಳೆಯರನ್ನು ಕುರಿತ ಸರಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳು

Dr. Sudha Seetharam speaks on Women’s Studies in the Field of Education

ಡಾ ಸುಧಾ ಸೀತಾರಾಮನ್ ಭಾಷಣ: ಶಿಕ್ಷಣ ಕ್ಷೇತ್ರದಲ್ಲಿ ಮಹಿಳಾ ಅಧ್ಯಯನ

Dr. Vijaya presides the session on Changing Trends in Women’s Movements and Studies

ಡಾ ವಿಜಯಾ ಅಧ್ಯಕ್ಷೀಯ ಭಾಷಣ: ಪರಿವರ್ತನೆಯ ಹಾದಿಯಲ್ಲಿ ಮಹಿಳಾ ಚಳುವಳಿ ಮತ್ತು ಅಧ್ಯಯನ

Sri MC Narasmihan speaks on Social Justice, Legal system and the decreasing space for Democratic Expression

ಶ್ರೀ ಎಂ ಸಿ ನರಸಿಂಹನ್ ಭಾಷಣ: ಸಾಮಾಜಿಕ ನ್ಯಾಯ, ಕಾನೂನು ವ್ಯವಸ್ಥೆ ಮತ್ತು ಸೊರಗುತ್ತಿರುವ ಪ್ರಜಾಸತ್ತಾತ್ಮಕ ಅಭಿವ್ಯಕ್ತಿ

Section of the audience

ಪ್ರತಿನಿಧಿಗಳು

 ವರದಿಗಳು :: Reports

Deccan Herald

Daiji World

Daiji World